ಸ್ವಸ್ಥ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಅಗತ್ಯ, ಜಿಲ್ಲಾ ಆಯುಷ್ ಅಧಿಕಾರಿ ಪರ್ವತಗೌಡ ಹಿರೇಗೌಡರ್ ಹೇಳಿಕೆ

free Ayurvedic treatment camp
ಗಂಗಾವತಿ ತಾಲೂಕಿನ ಮಲ್ಲಾಪುರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ಚಿಕಿತ್ಸೆ ಉಚಿತ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಛತ್ರಪ್ಪ ಶುಕ್ರವಾರ ಉದ್ಘಾಟಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಪರ್ವತಗೌಡ ಹಿರೇಗೌಡರ್, ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಸವಡಿ, ಮಲ್ಲಾಪುರ ಆಯುಷ್ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ರಾಜಶೇಖರ್ ನಾರಿನಾಳ್ ಇತರರಿದ್ದರು.
Published on

ಗಂಗಾವತಿ: ಒತ್ತಡದ ಬದುಕಿಗೆ ಆಯುರ್ವೇದ ಪದ್ಧತಿ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಸ್ವಸ್ಥ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪರ್ವತಗೌಡ ಹಿರೇಗೌಡರ್ ಹೇಳಿದರು.

ತಾಲೂಕಿನ ಮಲ್ಲಾಪುರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಜಿಲ್ಲಾ ಆಯುಷ್, ಗ್ರಾಪಂ ಮತ್ತು ಸ್ಪೂರ್ತಿ ಆಯುರ್ವೇದಿಕ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಯುರ್ವೇದ ಚಿಕಿತ್ಸೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ಆಯುರ್ವೇದ ಪದ್ಧತಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲ. ಆಯುರ್ವೇದ ಚಿಕಿತ್ಸೆ ಮೂಲಕ ಸ್ವಸ್ಥ ಸಮಾಜ ನಿರ್ಮಿಸಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಮಲ್ಲಾಪುರ ಆಯುಷ್ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ರಾಜಶೇಖರ್ ನಾರಿನಾಳ್ ಮಾತನಾಡಿ, ಸರ್ಕಾರದ ಆಯುಷ್ ಗ್ರಾಮ ಯೋಜನೆಯಡಿ ಆಯುರ್ವೇ ಚಿಕಿತ್ಸಾ ಪದ್ಧತಿಯನ್ನು ಮನೆಮನೆಗೆ ತಲುಪಿಸಲಾಗುತ್ತಿದೆ. ರಾಸಾಯನಿಕ ಔಷಧಕ್ಕಿಂತ ಪ್ರಕತಿ ನಿರ್ಮಿತ ಔಷಧ ಬಳಕೆಯಿಂದ ಸ್ವಸ್ಥ ಆರೋಗ ಕಾಪಾಡಲು ಸಾಧ್ಯ ಎಂದರು.

ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಸವಡಿ, ಗ್ರಾಪಂ ಅಧ್ಯಕ್ಷ ಛತ್ರಪ್ಪ, ಸದಸ್ಯರಾದ ಹನುಮಂತರೆಡ್ಡಿ, ಸ್ವಾತಿ, ವೈದ್ಯಾಧಿಕಾರಿಗಳಾದ ಗುರುರಾಜ ಉಮಚಗಿ, ಡಾ.ದೀಪ್ತಿ, ಡಾ. ಭಾನುಪ್ರಕಾಶ, ಡಾ. ಅಬೀದ್ ಹುಸೇನ್ ಇತರರಿದ್ದರು. ಆರೋಗ್ಯ ತಪಾಸಣೆ ಜತೆಗೆ ಪಂಚಕರ್ಮ ಚಿಕಿತ್ಸೆ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net