

ಗಂಗಾವತಿ: ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಜಗದ್ಗುರು ಶ್ರೀ ರೇಣುಕಾಚಾರ್ಯರು ನಿತ್ಯ ಸ್ಮರಣೀಯ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.
ನಗರದ ಆನೆಗೊಂದಿ ರಸ್ತೆಯ ಶ್ರೀ ತ್ರಯಂಬಕೇಶ್ವರ ದೇವಾಲಯದಲ್ಲಿ ಹಿರೇಜಂತಕಲ್ ಶ್ರೀ ವೀರಮಹೇಶ್ವರ ಜಂಗಮ ಸಂಘ, ವೀರಶೈವ ಲಿಂಗಾಯತ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಸಂದೇಶ ನೀಡಿದ್ದಾರೆ. ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರಾಗಿದ್ದಾರೆಂದ ಅವರು, ಸಮುದಾಯದ ಮುಖಂಡರು ಸಂಘಟನೆ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಧರ್ಮ ಎಲ್ಲಿ ಇರುತ್ತದೆ ಅಲ್ಲಿ ಶಾಂತಿ ನೆಲೆಸಿರುತ್ತದೆ ಎಂಬ ವಿಚಾರವನ್ನು ರೇಣುಕಾಚಾರ್ಯರು ಪ್ರತಿಪಾದಿಸಿದ್ದರು ಎಂದರು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ನಗರಸಭೆ ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಮಾಜಿ ಸದಸ್ಯ ಮನೋಹರಗೌಡ ಹೇರೂರು, ಮುಖಂಡರಾದ ಎಸ್.ಬಿ.ಹಿರೇಮಠ, ಸಂಘದ ಪದಾಧಿಕಾರಿಗಳಾದ ಸಂಗಮೇಶಸ್ವಾಮಿ ಕಣ್ಣೂರುಮಠ, ಹುಚ್ಚಯ್ಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಶಿವಯ್ಯಸ್ವಾಮಿ, ಗಂಗಾಧರ ಹಿರೇಮಠ, ಉಮೇಶ, ಎಲೆ ಮಂಜುನಾಥ, ಪತ್ರಿ ಮಂಜುನಾಥ, ಮಲ್ಲಯ್ಯ ಹೆಬ್ಬಾಳ, ಆಂದಯ್ಯಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಸಂಶಿಮಠ, ಸಂಗಯ್ಯಸ್ವಾಮಿ ಸೊಪ್ಪಿನಮಠ, ವೀರಯ್ಯಸ್ವಾಮಿ ಹುಲಿಗುಡ್ಡ ಇತರರಿದ್ದರು.