ಸಮುದಾಯದ ಪ್ರಗತಿಗೆ ಸಂಘಟನೆ ಅಗತ್ಯ

mass wedding program
ಗಂಗಾವತಿ ತಾಲೂಕಿನ ದಾಸನಾಳದ ಶ್ರೀ ಕಾಟಮಯ್ಯ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಜಾತ್ರಾಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಗುರುವಾರ ಉದ್ಘಾಟಿಸಿದರು. ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ, ನಗರಸಭೆ ಕಾನೂನು ಸಲಹೆಗಾರ ಎಸ್.ನಾಗರಾಜ್ ಗುತ್ತೇದಾರ್ ಇತರರಿದ್ದರು.
Published on

ಗಂಗಾವತಿ: ಈಡಿಗ ಸಮುದಾಯದ ಅಭಿವೃದ್ಧಿ ಮತ್ತು ಎಲ್ಲ ಕ್ಷೇತ್ರದ ಪ್ರಗತಿಗೆ ಸಂಘಟನೆ ಮುಖ್ಯವಾಗಿದ್ದು, ಕುಲದೇವರ ಅನುಗ್ರಹ ಮುಖ್ಯವಾಗಿದೆ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.

ತಾಲೂಕಿನ ದಾಸನಾಳದ ಶ್ರೀ ಕಾಟಮಯ್ಯ ದೇವಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾತ್ರಾಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಲ ಗುರುಗಳ ಮಾರ್ಗದರ್ಶನ, ಆಶೀರ್ವಾದವಿದ್ದಲ್ಲಿ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ. ಸಮುದಾಯದವರು ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದು, ಸಾಮರಸ್ಯದ ಬದುಕು ಸಾಗಿಸಿದಾಗ ಜೀವನ ಸಾರ್ಥಕವಾಗಲಿದೆ ಎಂದರು.

ನಗರಸಭೆ ಕಾನೂನು ಸಲಹೆಗಾರ ಎಸ್.ನಾಗರಾಜ್ ಗುತ್ತೇದಾರ್ ಮಾತನಾಡಿ, ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಗುರು ಪರಂಪರೆ ಮತ್ತು ದೈವತ್ವ ನಂಬಿ ನಡೆದಾಗ ಜೀವನ ಸಮದ್ಧವಾಗಲು ಸಾಧ್ಯ. ಸಮುದಾಯದ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಆಗಮಿಸುವ ಮೂಲಕ ಸಾಮರಸ್ಯ ಹೆಚ್ಚಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿ ಶ್ರೀ ರೇಣುಕಾನಂದ ಶ್ರೀಗಳ 14ನೇ ತುಲಭಾರ ಸೇವೆ ನೆರವೇರಿಸಲಾಯಿತು. ಎರಡು ಜೋಡಿ ಸಾಮೂಹಿಕ ವಿವಾಹ ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮುಖಂಡರಾದ ಬಸವಣ್ಣೆಯ್ಯ ಶಾಸಿ, ಈ.ನಾಗೇಶ ಚಿಕ್ಕಡಂಕನಕಲ್, ಈ.ಶ್ರೀಕಾಂತ ಮರ್ಲಾನಹಳ್ಳಿ, ಹರಿಬಾಬು ಕಾರಟಗಿ, ಶ್ರೀನಾಥ ಕಾರಟಗಿ, ಶರಣಪ್ಪ ಮೈಲಾಪುರ, ರಾಘವೇಂದ್ರ ಜಂತಕಲ್, ಶೇಖರಪ್ಪ ಚಳ್ಳೂರು, ಪ್ರಭು ಬಸಾಪಟ್ಟಣ, ರಂಗಪ್ಪ ಆರಾಳ್, ಹನುಮಂತರಾಯ ವಡ್ಡರಹಟ್ಟಿ, ಭುವನೇಶಪ್ಪ ಉಡುಮಕಲ್, ಈ.ವೀರೇಶ ಮರ್ಲಾನಹಳ್ಳಿ, ತುಕಾರಾಮಪ್ಪ ಕಲಿಕೇರಿ, ಶರಣಪ್ಪ ಉಳೇನೂರು, ರಾಜಶೇಖರ್ ವೆಂಕಟಗಿರಿ, ಮಾರುತೇಶ, ಈ.ಮಾರ್ಕಂಡಯ್ಯ, ಪ್ರಕಾಶ್, ಬಸವರಾಜ್, ನಿರುಪಾದಿ, ರಾಜಕುಮಾರ, ರಾಜಶೇಖರ್, ವಿರುಪಣ್ಣ ಕುಣಿಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net