

ಗಂಗಾವತಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನ.26ರಂದು ಗಂಗಾವತಿ ಬಂದ್‌ಗೆ ಕರೆ ನೀಡಲಾಗಿದ್ದು, ವ್ಯಾಪಾರಸ್ಥರು ಸ್ಪಂದಿಸಿದ್ದಾರೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿಬೆಣಕಲ್ ಹೇಳಿದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ನಗರದ ಸಿಬಿಎಸ್ ವೃತ್ತದಲ್ಲಿ ಸಿಪಿಐ(ಎಂ), ಸಿಐಟಿಯು, ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಆಯೋಜಿಸಿದ್ದ ಪ್ರಚಾರಂದೋಲನದಲ್ಲಿ ಮಾತನಾಡಿದರು. ರೈತರ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ವಾಣಿಜ್ಯ ಮಾರಾಟ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ, ವಿದ್ಯುತ್, ಭೂಸುಧಾರಣೆ ಕಾಯ್ದೆಗಳ ಮೂಲಕ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಮೇಲೆ ಪರಿಣಾ ಬೀರಿದೆ. ಮೂಲಸೌಕರ್ಯ ಒದಗಿಸುವಲ್ಲಿ ವಿಲವಾದ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ. ಮಾರಕ ಕಾಯ್ದೆ ಹಿಂಪಡೆಯುವುದು, ಖಾತ್ರಿ ಯೋಜನೆಯಡಿ ಮಾನವ ದಿನ ಹೆಚ್ಚಿಸುವುದು, ನಿವೇಶನ ರಹಿತರಿಗೆ ನಿವೇಶನ, ಮನೆ ವಿತರಣೆ, ಪಡಿತರ ಯೋಜನೆ ಸಮರ್ಪಕ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು, ವ್ಯಾಪಾರಿಗಳು ಸ್ಪಂದಿಸಿದ್ದಾರೆ. ಸಿಬಿಎಸ್ ವೃತ್ತದಿಂದ ಕೃಷ್ಣ ದೇವರಾಯ ವೃತ್ತದವರಿಗೂ ಪ್ರತಿಭಟನೆ ರ‌್ಯಾಲಿ ಮೂಲಕ ತೆರಳಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ, ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಶಿವಣ್ಣಬೆಣಕಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಕೃಷ್ಣಪ್ಪ ನಾಯಕ, ಟಿ.ನಬೀಸಾಬ್, ಮಂಜುನಾಥ ನಾಯಕ, ಸೋಮನಾಥಗೌಡ ಈಚನಾಳ್, ನಾಗೇಶನಾಯಕ, ಮಹೆಬೂಬ್ ಇತರರಿದ್ದರು.