ಕೆಟ್ಟ ಚಟಗಳಿಂದ ಉತ್ತಮ ಬದುಕು ಹಾಳು

Gangavathi Drug-Free Day
ಗಂಗಾವತಿ ಪಂಪಾನಗರ ಶ್ರೀ ಕೊಟ್ಟೂರೇಶ್ವರ ಸಂ.ಪ.ಪೂ.ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆ ಕುರಿತ ೋಷಣೆಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು. ಉಪವಿಭಾಗ ಆಸ್ಪತ್ರೆ ಮನೋರೋಗ ತಜ್ಞ ಡಾ.ವಾದಿರಾಜ್ ಗೋರೆಬಾಳ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ಪ್ರಾಚಾರ್ಯ ಚಂದ್ರಶೇಖರ ಹಂಚಿನಾಳ, ಉಪನ್ಯಾಸಕರಾದ ಹುಲುಗಪ್ಪ, ಮೀನಾಕ್ಷಿ ಇತರರಿದ್ದರು.
Published on

ಗಂಗಾವತಿ: ಇಲ್ಲಿನ ಪಂಪಾನಗರ ಶ್ರೀ ಕೊಟ್ಟೂರೇಶ್ವರ ಸಂ.ಪ.ಪೂ. ಕಾಲೇಜಿನಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ವ್ಯಸನಮುಕ್ತ ದಿನಾಚರಣೆ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವ್ಯಸನಮುಕ್ತ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉಪವಿಭಾಗ ಆಸ್ಪತ್ರೆ ಮನೋರೋಗ ತಜ್ಞ ಡಾ.ವಾದಿರಾಜ್ ಗೋರೆಬಾಳ್ ಮಾತನಾಡಿ, ವ್ಯಸನದಿಂದ ವ್ಯಕ್ತಿತ್ವ ಹಾಳಾಗುತ್ತಿದ್ದು, ಕುಟುಂಬದ ಮೇಲೂ ಪರಿಣಾಮ ಬೀರಲಿದೆ. ಉತ್ತಮ ಬದುಕಿಗಾಗಿ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಚಂದ್ರಶೇಖರ ಹಂಚಿನಾಳ್, ಉಪನ್ಯಾಸಕರಾದ ಹುಲುಗಪ್ಪ, ಮೀನಾಕ್ಷಿ, ಕೃಷ್ಣಕುಮಾರ್, ಸುಮಲತಾ ಇತರರಿದ್ದರು.

ತಹಸಿಲ್ ಕಚೇರಿ: ನಗರದ ತಹಸಿಲ್ ಕಚೇರಿಯಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ವ್ಯಸನಮುಕ್ತ ದಿನ ಶುಕ್ರವಾರ ಆಚರಿಸಲಾಯಿತು. ವಿವಿಧ ಇಲಾಖೆ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಭಾರ ತಹಸೀಲ್ದಾರ್ ರವಿ ಅಂಗಡಿ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಪ್ರಕಾಶ ನಾಯ್ಕ, ಕೃಷ್ಣವೇಣಿ, ಶ್ರೀಕಂಠೇಶ, ಎಂ.ಡಿ.ರಫಿ, ನಾಗರತ್ನಮ್ಮ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net