

ಗಂಗಾವತಿ: ಮಾದಕವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕಿದ್ದು, ದುಶ್ಚಟಗಳಿಗೆ ಬಲಿಯಾಗದಂತೆ ಪ್ರೊಬೇಷನರಿ ಪಿಎಸ್‌ಐ ಚೇತನ ಪಾಟೀಲ್ ಸಲಹೆ ನೀಡಿದರು.
ನಗರದ ಪೈ ಮೆಡಿಕಲ್ ಅಕಾಡೆಮಿಯ ಬಿಬಿಸಿ ಪಿಯು ಸೈನ್ಸ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ಕುರಿತ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ದೈಹಿಕ ಮತ್ತು ಮಾನಸಿಕಕ್ಕೆ ಮಾರಕವಾದ ಬೀಡಿ, ಸಿಗರೇಟ್, ಗುಟ್ಖಾ, ಮದ್ಯಪಾನ, ಗಾಂಜಾಗಳ ಬಗ್ಗೆ ಜಾಗೃತರಾಗಬೇಕಿದ್ದು, ಅಪರಾಧ ಮನೋಭಾವಗಳಿಗೆ ಕಾರಣಾವಾಗಲಿವೆ. ಮೊಬೈಲ್ ಬಳಕೆ ನಿಯಂತ್ರಿಸಬೇಕಿದ್ದು, ಕಾಲೇಜು ಘಟ್ಟದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎಸ್.ವಿನೋದ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಂತ ಮುಖ್ಯವಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ಮುಖ್ಯಘಟ್ಟ. ದುಶ್ಚಟಗಳಿಂದ ದೂರವಿದ್ದು, ನಿರಂತರ ಕಲಿಕೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಪ್ರೊಬೇಷನರಿ ಪಿಎಸ್‌ಐ ಎ.ಆರ್.ಚೇತನ್, ಎಸ್‌ಐಗಳಾದ ವೀರೇಶ, ಶಿವಶರಣಪ್ಪ, ಅಕಾಡೆಮಿ ನಿರ್ದೇಶಕಾದ ಗಾಂಧಿ ಕೊಂಡವೀಟಿ, ಸಂದೀಪ ನಾಯಕ ಇತರರಿದ್ದರು.