ಕರ್ನಾಟಕ ರತ್ನ ನೀಡಿ ಗೌರವ ಹೆಚ್ಚಿಸಿಕೊಂಡ ಸರ್ಕಾರ

Vishnuvardhan's birthday celebration
ಗಂಗಾವತಿ ಮೇದಾರ ಓಣಿಯಲ್ಲಿ ಕರ್ನಾಟಕ ರತ್ನ ಡಾ.ವಿಷ್ಣುದಾದಾ ಅಭಿಮಾನಿಗಳ ಬಳಗದಿಂದ ಡಾ.ವಿಷ್ಣುವರ್ಧನ್ ಜನ್ಮದಿನ ಆಚರಿಸಲಾಯಿತು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಸದಸ್ಯ ಮೌಲಸಾಬ್, ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಇತರರಿದ್ದರು.
Published on

ಗಂಗಾವತಿ: ನಗರದ ಮೇದಾರ ಓಣಿಯ ವಿಷ್ಣುವರ್ಧನ ವೃತ್ತದಲ್ಲಿ ಕರ್ನಾಟಕ ರತ್ನ ಡಾ.ವಿಷ್ಣುದಾದಾ ಅಭಿಮಾನಿಗಳ ಬಳಗದಿಂದ ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ ಗುರುವಾರ ಆಚರಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಕೇಕ್ ಕತ್ತರಿಸಿ ಗೌರವ ಸಲ್ಲಿಸಲಾಯಿತು. ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತನಾಡಿ, ಮನೋಜ್ಞ ಅಭಿನಯದ ಮೂಲಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ವಿಷ್ಣುವರ್ಧನ್, ನಾಡು ಕಂಡ ಶ್ರೇಷ್ಟ ನಟ. ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಗೌರವ ಹೆಚ್ಚಿಸಿಕೊಂಡಿದೆ ಎಂದರು. ನಂತರ ಅನ್ನಸಂತರ್ಪಣೆ ನಡೆಯಿತು. ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಹವ್ಯಾಸಿ ಗಾಯಕರಿಂದ ವಿಷ್ಣು ಅಭಿನಯದ ಹಾಡುಗಳ ಕರೋಕೆ ಗಾನ ಸಂಭ್ರಮ ನಡೆಯಿತು.

ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಸದಸ್ಯ ಮೌಲಸಾಬ್, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಅಭಿಮಾನಿ ಬಳಗದ ಸದಸ್ಯರಾದ ಕೆ.ಎಂ.ಶರಣಯ್ಯಸ್ವಾಮಿ, ಮಹಾಬಳೇಶ, ನಾಗರಾಜ್ ಮೇದಾರ್, ಶರ್ೀ ಇತರರಿದ್ದರು.

ವಿರುಪಾಪುರ ತಾಂಡಾ: ನಗರದ ವಿರುಪಾಪುರ ತಾಂಡಾದ ಸಂತ ಸೇವಾಲಾಲ್ ವೃತ್ತದಲ್ಲಿ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಜನ್ಮದಿನ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡುನಾಯ್ಕ ಮಾತನಾಡಿದರು. ಮುಖಂಡರಾದ ಹನುಮಂತಪ್ಪ, ಕಷ್ಣ ನಾಯ್ಕ, ರವಿಚಂದ್ರ, ರವಿನಾಯ್ಕ, ವೆಂಕಟೇಶ್ ಜಾಧವ್, ರಾಜಪ್ಪ, ಹನುಮಂತ, ಸೋಮ್ಲಾ, ವೆಂಕಣ್ಣ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net