ಡಾ.ವಿಷ್ಣು ಸ್ಮಾರಕ ಮರು ನಿರ್ಮಾಣವಾಗಲಿ

gvt 08
ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಸದಸ್ಯರು ಗಂಗಾವತಿ ಪ್ರಭಾರ ತಹಸೀಲ್ದಾರ್ ಎಸ್.ರವಿ ಅಂಗಡಿಗೆ ಮನವಿ ಸಲ್ಲಿಸಿದರು. ಸದಸ್ಯರಾದ ಕೆ.ನಿಂಗಜ್ಜ, ನಾಗರಾಜ್ ಮೇದಾರ್, ಕೆ.ರಂಗಪ್ಪ, ಮಹಾಬಳೇಶ ಇತರರಿದ್ದರು.
Published on

ಗಂಗಾವತಿ: ಹಿರಿಯ ನಟ ದಿ.ವಿಷ್ಣುವರ್ಧನ್ ಸ್ಮಾರಕ ಧ್ವಂಸಗೊಳಿಸಿದ ಪ್ರಕರಣ ಖಂಡಿಸಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಮೇರು ನಟರಾಗಿದ್ದ ವಿಷ್ಣುವರ್ಧನ್, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಂಥವರ ಸ್ಮಾರಕ ಧ್ವಂಸಗೊಳಿಸುವ ಮೂಲಕ ಅಪಮಾನ ಮಾಡಲಾಗಿದ್ದು, ಮರು ನಿರ್ಮಾಣಕ್ಕೆ ಸರ್ಕಾರ ಮಧ್ಯ ಪ್ರವೇಶಿಸಬೇಕಿದೆ.

ನ್ಯಾಯಾಲಯ ತೀರ್ಪು ಮುಂದಿಟ್ಟುಕೊಂಡು ಸ್ಮಾರಕ ಧ್ವಂಸಗೊಳಿಸಿದ್ದು ಸರಿಯಲ್ಲ. ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ಡಾ.ವಿಷ್ಣು ಕೊಡುಗೆ ಸಾಕಷ್ಟಿದ್ದು, ಅಪಮಾನ ಮಾಡುವುದು ಸರಿಯಲ್ಲ.

ಕೂಡಲೇ ಸ್ಮಾರಕ ಸ್ಥಳದಲ್ಲಿ ಸರ್ಕಾರ ಜಾಗ ಖರೀದಿಸಿ, ಪುನರ್ ನಿರ್ಮಾಣಕ್ಕೆ ಆಸಕ್ತಿವಹಿಸುವಂತೆ ಅಭಿಮಾನಿಗಳು ಒತ್ತಾಯಿಸಿ ಪ್ರಭಾರ ತಹಸೀಲ್ದಾರ್ ಎಸ್.ರವಿ ಅಂಗಡಿಗೆ ಮನವಿ ಸಲ್ಲಿಸಿದರು.

ಅಭಿಮಾನಿ ಬಳಗದ ಸದಸ್ಯರಾದ ಕೆ.ನಿಂಗಜ್ಜ, ನಾಗರಾಜ್ ಮೇದಾರ್, ಕೆ.ರಂಗಪ್ಪ, ಮಹಾಬಳೇಶ, ಮಾರುತಿ ಐಲಿ, ರಮೇಶ ನೇತ್ರ, ಶರೀಫ್, ಅಜ್ಮೀರ್, ರಾಜು, ಕೆ.ಎಂ.ಶರಣಯ್ಯಸ್ವಾಮಿ, ಮಲ್ಲಿಕಾರ್ಜುನ ಗೋಟೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net