ಕಾರ್ಮಿಕರ ಶ್ರೇಯೋಭಿವದ್ಧಿಗೆ ಯತ್ನ

Gangavathi district Workers Association
ಗಂಗಾವತಿ ಕ್ರಾಂತಿ ಚಕ್ರ ಬಳಗದ ಕಚೇರಿ ಆವರಣದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯನ್ನು ಆರಂಭಿಸಲಾಯಿತು. ಅಧ್ಯಕ್ಷ ಜೆ.ಭಾರದ್ವಾಜ, ಕಾರ್ಮಿಕ ಇಲಾಖೆ ನಿವೃತ್ತ ನಿರೀಕ್ಷಕ ಶೇಖರಗೌಡ ಮಾ.ಪಾಟೀಲ್, ಜಿಲ್ಲಾಧ್ಯಕ್ಷ ಇಬ್ರಾಹಿಂ ಇತರರಿದ್ದರು.
Published on

ಗಂಗಾವತಿ: ನಗರದ ಕ್ರಾಂತಿ ಚಕ್ರ ಬಳಗದ ಕಚೇರಿ ಆವರಣದಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯನ್ನು ಬುಧವಾರ ಆರಂಭಿಸ ಲಾಯಿತು. ಕ್ರಾಂತಿ ಚಕ್ರ ಬಳಗ ಮತ್ತು ದುಡಿಯುವ ವರ್ಗಗಳ ವೇದಿಕೆ ಅಧೀನದಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕ್ರಾಂತಿ ಚಕ್ರ ಬಳಗದ ಅಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಕಾರ್ಮಿಕರ ಶ್ರೇಯೋಭಿವದ್ಧಿಗಾಗಿ ಶ್ರಮಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆ ನಿವೃತ್ತ ನಿರೀಕ್ಷಕ ಶೇಖರಗೌಡ ಮಾಲೀ ಪಾಟೀಲ್, ಪದಾಧಿಕಾರಿಗಳಾದ ಯಾಜ್, ಇಬ್ರಾಹಿಂ ಇತರರಿದ್ದರು.

ಪದಾಧಿಕಾರಿಗಳ ಆಯ್ಕೆ: ಜಿಲ್ಲಾಸಮಿತಿಗೆ ಶೇಖರಗೌಡ ಮಾ.ಪಾಟೀಲ್ (ಗೌರವ ಸಲಹೆಗಾರ), ಇಬ್ರಾಹಿಂ(ಅಧ್ಯಕ್ಷ), ಹನುಮಂತಚೌಡಪ್ಪ (ಉಪಾಧ್ಯಕ್ಷ), ಮಹೆಬೂಬ್‌ಸಾಬ್ ಲಾಠಿ (ಪ್ರಧಾನ ಕಾರ್ಯದರ್ಶಿ), ಚಾಂದ್‌ಪಾಷಾ (ಜಂಟಿ ಕಾರ್ಯದರ್ಶಿ), ಕೆ.ಮರಿಸ್ವಾಮಿ, ಎಸ್.ಸಿಖಂದರ್ (ಸಂ.ಕಾರ್ಯದರ್ಶಿ), ಸೈಯ್ಯದ್ ಯೂಸ್ೂ (ಖಜಾಂಚಿ)ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net