

ಗಂಗಾವತಿ: ಕ್ರೀಡಾ ಇಲಾಖೆಯಿಂದ ಅಂಗವಿಕಲರ ಆಟೋಟಗಳನ್ನು ಆಯೋಜಿಸಬೇಕಿದ್ದು, ಈ ಭಾಗದ ಅಂಗವಿಕಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಮಾಜಿ ಸಂಸದ ಎಸ್.ಶಿವರಾಮನಗೌಡ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಿಷ್ಕಿಂದ ದಿವ್ಯಾಂಗರ ಸ್ಪೋರ್ಟ್ಸ್ ಅಕಾಡೆಮಿ, ತುಮಕೂರಿನ ದಿವ್ಯಾಂಗ ಮೈತ್ರಿ ಸ್ಪೋಟ್ಸ್ ಅಕಾಡೆಮಿ, ಬೆಂಗಳೂರಿನ ಬೋರ್ಡ್ ಆ್ ವ್ಹೀಲ್‌ಚೇರ್ ಕ್ರಿಕೆಟ್ ಕಂಟ್ರೋಲ್ ಇನ್ ಕರ್ನಾಟಕ ಮತ್ತು ಕೊಪ್ಪಳದ ಕನಸು-ನನಸು ಚಾರಿಟಬಲ್ ಟ್ರಸ್ಟ್ ಾರ್ ದಿವ್ಯಾಂಗರ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಕಲಚೇತನ ವ್ಹೀಲ್‌ಚೇರ್ ಮತ್ತು ಸಿಟ್ಟಿಂಗ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಗವಿಕಲರು ಕ್ರೀಯಾಶೀಲತೆಯಿಂದ ಪಾಲ್ಗೊಂಡಿದ್ದಾರೆ. ಇವರಿಗೆ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸುವಂತೆ ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಮಾತನಾಡಿ, ವಿಕಲಚೇತನರ ಆಟೋಟಗಳಿಗೆ ಎಲ್ಲ ರೀತಿ ಸಹಕಾರ ನೀಡಲಾಗುತ್ತಿದ್ದು, ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದರು.
ಮೂರು ದಿನಗಳ ಪಂದ್ಯಾವಳಿಯಲ್ಲಿ 7 ತಂಡಗಳು ಭಾಗವಹಿಸಿದ್ದವು. ಬೆಂಗಳೂರು ವಾರಿಯರ್ಸ್ ತಂಡ ಪ್ರಥಮ, ಕೊಪ್ಪಳ ತಂಡ ದ್ವೀತಿಯ ಮತ್ತು ಬೆಳಗಾವಿ ತಂಡ ತೃತೀಯ ಸ್ಥಾನ ಪಡೆದಿದ್ದು, ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮಹಾನ್ ಕಿಡ್ಸ್ ಸ್ಕೂಲ್ ಮುಖ್ಯಸ್ಥ ನೇತ್ರಾಜ್ ಗುರುವಿನಮಠ, ವಿವಿಧ ಅಕಾಡೆಮಿ ಪದಾಧಿಕಾರಿಗಳಾದ ಡಾ.ಅಶೋಕ ಡಂಬರ್, ಮಲ್ಲಿಕಾರ್ಜುನ ವೈ.ಪೂಜಾರ್, ಹುಲುಗಪ್ಪ ಕಾಗೇರಿ, ಅಸ್ೀ, ಬಸವರಾಜ ಗೋನಾಳ್, ಮಂಜುನಾಥ ಹೊಸ್ಕೇರಿ, ಜಾರ್ ಇತರರಿದ್ದರು.