ಡಿಪ್ಲೊಮಾ ಇನ್ ಾರ್ಮಸಿಗೆ ಬೇಡಿಕೆ

Diploma in Pharmacy
ಗಂಗಾವತಿ ವಿದ್ಯಾನಗರದ ಸ್ಫೂರ್ತಿ ಕಾಲೇಜ್ ಆ್ ಾರ್ಮಸಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಚಟುವಟಿಕೆಗಳಿಗೆ ರಾಜ್ಯ ರಿಜಿಸ್ಟರ್ಡ್ ಾರ್ಮಸಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರು ಬುಧವಾರ ಚಾಲನೆ ನೀಡಿದರು. ಸ್ಫೂರ್ತಿ ಸಮೂಹ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಸವಡಿ ಇತರರಿದ್ದರು.
Published on

ಗಂಗಾವತಿ: ಡಿಪ್ಲೊಮಾ ಇನ್ ಫಾರ್ಮಸಿ ಪದವೀಧರರಿಗೆ ಉದ್ಯೋಗಾವಕಾಶ ಹೆಚ್ಚಿದ್ದು, ಪ್ರಸ್ತುತ ದಿನಮಾನದಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ರಾಜ್ಯ ರಿಜಿಸ್ಟರ್ಡ್ ಾರ್ಮಸಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರು ಹೇಳಿದರು.

ನಗರದ ವಿದ್ಯಾನಗರದ ಸ್ಫೂರ್ತಿ ಕಾಲೇಜ್ ಆ್ ಾರ್ಮಸಿಯಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯ ಚಟುವಟಿಕೆಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಔಷಧ ಮಾರಾಟ ಮಳಿಗೆಗಳಿದ್ದು, ಪದವೀಧರರ ಅಗತ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಾರ್ಮಸಿ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೂ ಾರ್ಮಸಿ ಪದವೀಧರರೇ ಬೇಕಿದೆ. ಪಿಯುಸಿಯಿಂದ ಬಿಾರ್ಮಸಿ ಮಾಡುದಕ್ಕಿಂತ ಡಿಾರ್ಮಸಿ ನಂತರ ಮಾಡಿದರೆ ಹೆಚ್ಚಿನ ಜ್ಞಾನ ದೊರೆಯಲಿದೆ ಎಂದರು.

ಸ್ಫೂರ್ತಿ ಸಮೂಹ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಸವಡಿ, ಾರ್ಮಸಿ ವಿವಿಧ ಕಾಲೇಜಿನ ಪ್ರಾಚಾರ್ಯರಾದ ಶರಣಬಸವ, ಡಾ.ವಾಸೀಲ್, ಜಡಿಸ್ವಾಮಿ ದಾಸನಾಳ್, ಾರ್ಮಸಿಸ್ಟ್‌ಗಳಾದ ಆಸ್ಮಾ, ಸವಿತಾ ಸವಡಿ, ಶಿವಾನಂದ ನಾಯ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net