

ಗಂಗಾವತಿ: ತಾಲೂಕಿನ ಢಣಾಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಶ್ರೀ ಶೈಲ ಮಾಲಾಧಾರಿಗಳಿಂದ 20ನೇ ವರ್ಷದ ವಿಶೇಷ ಪೂಜೆ ಮತ್ತು ಅನ್ನ ದಾಸೋಹ ಕಾರ್ಯಕ್ರಮ ಗುರುವಾರ ನಡೆಯಿತು.
ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಭಜನೆ, ಶಿವಸ್ತುತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಿತು. ಮಾಲಾಧಾರಿಗಳಾದ ಜೆ.ಭೀಮನಗೌಡ,ಪಿ.ಪಿ.ಮಂಜುನಾಥ, ವೀರನಾಗಪ್ಪ, ವೈ.ಬಸವರಾಜ, ಪಿಡ್ಡಪ್ಪ, ಮಂಜುನಾಥ ಕುಂಬಾರ, ಲಿಂಗರಾಜ್ ಹೂಗಾರ್, ಮೃತ್ಯುಂಜಯ, ಮೌನೇಶ,ಸಿ.ಎಚ್.ಮಂಜುನಾಥ, ವೀರನಗೌಡ, ಮಲ್ಲಿಕಾರ್ಜುನ, ರಾಜೇಂದ್ರ, ಮಡ್ಡೇರ್ ಮಂಜುನಾಥ, ಬಿ.ಬೃಂದಾ ಇತರರಿದ್ದರು.