ಮಂಗಳವಾದ್ಯದೊಂದಿಗೆ ಭಾವಚಿತ್ರ ಮೆರವಣಿಗೆ

Gangavathi vasavi jayanti
ಢಣಾಪುರದಲ್ಲಿ ಶ್ರೀ ವಾಸವಿ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಜರುಗಿತು. ವಾಸವಿ ಯುವಜನ ಸಂಘದ ಪದಾಧಿಕಾರಿಗಳಾದ ಮುತ್ತುರಾಜ ಶ್ರೇಷ್ಟಿ, ಗುರುರಾಜ ಶ್ರೇಷ್ಟಿ, ಪ್ರಹ್ಲಾದ್ ಶ್ರೇಷ್ಟಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಢಣಾಪುರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶ್ರೀ ವಾಸವಿ ಜಯಂತ್ಯುತ್ಸವ ಗುರುವಾರ ಆಚರಿಸಲಾಯಿತು.

ಗ್ರಾಮದ ಆರ್ಯವೈಶ್ಯ ಸಮಾಜದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾವಚಿತ್ರ ಮೆರವಣಿಗೆಯನ್ನು ನಗರದ ಶ್ರೀ ಮಾರುತೇಶ್ವರ ದೇವಾಲಯದಿಂದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದವರೆಗೆ ಕುಂಭ, ಕಳಸ, ಭಜನೆ ಮತ್ತು ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು. ನಂತರ ದೇವಾಲಯದಲ್ಲಿ ಶ್ರೀ ವಾಸವಿ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಪಾರಾಯಣ ಮತ್ತು ಭಜನೆ ಜರುಗಿತು.

ಶ್ರೀ ವಾಸವಿ ಯುವ ಜನ ಸಂಘದ ಪದಾಧಿಕಾರಿಗಳಾದ ಮುತ್ತುರಾಜ ಶ್ರೇಷ್ಟಿ, ಗುರುರಾಜ ಶ್ರೇಷ್ಟಿ, ಪ್ರಹ್ಲಾದ್ ಶ್ರೇಷ್ಟಿ, ರಾಘವೇಂದ್ರ ಪೂರ್ಮ, ಕೆ.ಎಸ್. ರಾಜುಶ್ರೇಷ್ಟಿ, ವೀರೇಶ ಪೂರ್ಮ, ದತ್ತು ಅಯೋಧ್ಯಾ, ಸುರೇಶ ಶ್ರೇಷ್ಟಿ ಹೆಬ್ಬಾಳ, ಶ್ರೀನಿವಾಸ ಶ್ರೇಷ್ಟಿ, ವಿಶ್ವನಾಥ ಪೂರ್ಮ ಇತರರಿದ್ದರು.

ಬಸಾಪಟ್ಟಣ: ತಾಲೂಕಿನ ಬಸಾಪಟ್ಟಣದ ಶ್ರೀ ವಾಸವಿ ಮಂಗಲ ಭವನದಲ್ಲಿ ಆರ್ಯವೈಶ್ಯ ಯುವಜನ ಸಂಘದಿಂದ ಶ್ರೀ ವಾಸವಿ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಆಂಜನೇಯ ದೇವಾಲಯದಿಂದ ವಾಸವಿ ಮಂಗಲ ಭವನದವರೆಗೆ ಭಾವಚಿತ್ರವನ್ನು ಕುಂಭ, ಕಳಸದೊಂದಿಗೆ ಮೆರವಣಿಗೆ ನೆರವೇರಿಸಲಾಯಿತು.

ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪಾರಾಯಣ, ಭಜನೆ, ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಸಂಘದ ಪದಾಧಿಕಾರಿಗಳಾದ ಸತ್ಯನಾರಾಯಣ ಸುರೇಬಾನ್, ಸಂತೋಷ, ಹನುಮೇಶ, ಬಾಲಗುರು, ಮಂಜುನಾಥ ಇಂದ್ರಿಗಿ, ನಾಗರಾಜ್, ಮಹೇಶ ಜನಾದ್ರಿ, ಚಂದ್ರಕಾಂತ, ಬಸಯ್ಯ, ಗವಿಸಿದ್ದೇಶ, ಯಲ್ಲಯ್ಯ , ಮಹಿಳಾ ಸಂಘದ ಪದಾಧಿಕಾರಿಗಳಾದ ಸವಿತಾ, ಜಿ.ಉಷಾ, ಸುಲಕ್ಷಣ ಇಂದ್ರಿಗಿ, ಲಕ್ಷ್ಮೀ, ವರಮಹಾಲಕ್ಷ್ಮೀ, ವಾಣಿಶ್ರೀ ನಾಗರತ್ನಾ, ಪ್ರಭಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net