

ಗಂಗಾವತಿ: ತಾಲೂಕಿನ ಢಣಾಪುರದಲ್ಲಿ ಮನೆ ಗೋಡೆ ಕುಸಿದು ಮಗು ಮೃತಪಟ್ಟ ನಿವಾಸಕ್ಕೆ ಜೆಎಂಎ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಕಾಯಿ ನೇತೃತ್ವದ ಕಂದಾಯ ಮತ್ತು ನ್ಯಾಯಾಧೀಶರ ತಂಡ ಶುಕ್ರವಾರ ಭೇಟಿ ಮಾಹಿತಿ ಪಡೆದುಕೊಂಡಿತು.
ಭಾರಿ ಮಳೆಯಿಂದ ಢಣಾಪುರದಲ್ಲಿ ಮಗುವೊಂದು ಮೃತಪಟ್ಟಿದ್ದು, ಕುಟುಂಬದ ನಾಲ್ವರು ಗಂಭೀರ ಗಾಯಗೊಂಡಿದ್ದರು. ಮಾಹಿತಿ ಅರಿತ ತಂಡ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿತಲ್ಲೇ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ರಿಂದ ಮುಂದಿನ ಕ್ರಮ ಮತ್ತು ಪರಿಹಾರ ಕುರಿತು ಅಭಿಪ್ರಾಯ ಸಂಗ್ರಹಿಸಿತು. ಮಳೆಗಾಲ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಪಂ ಮತ್ತು ಕಂದಾಯ ಸಿಬ್ಬಂದಿಗೆ ಸೂಚಿಸಿ ಜನರಲ್ಲಿ ಜಾಗೃತಿ ಮೂಡಿಸುವಮತೆ ಸಲಹೆ ನೀಡಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಗ್ರಾಮೀಣ ಪಿಐ ರಂಗಪ್ಪ ದೊಡ್ಮನಿ, ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಎನ್.ನಾಯಕ, ಗ್ರಾಪಂ ಅಧ್ಯಕ್ಷ ವೀರೇಶಗೌಡ ಸೇರಿ ಪಿಡಿಒ, ಆರ್‌ಐ ಮತ್ತು ವಿಎಗಳಿದ್ದರು.