‘ದೇಸಿಗಿತಿ’ ಕಾದಂಬರಿಯಲ್ಲಿ ಹೆಣ್ಣಿನ ನೋವು - ಗಂಗಾವತಿ ಪ್ರಾಣೇಶ ಅಭಿಪ್ರಾಯ

Gvt-1
ಗಂಗಾವತಿ ಕಸಾಪ ಭವನದಲ್ಲಿ ಕಸಾಪ ಜಿಲ್ಲಾ ಘಟಕ, ಇಂದಿರೇಶ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂದಾಯ ನೌಕರ ಹಾಲೇಶ ಗುಂಡಿ ಬರೆದ ದೇಸಿಗಿತಿ ಕಾದಂಬರಿಯನ್ನು ಮಂಗಳವಾರ ಗಣ್ಯರು ಬಿಡುಗಡೆಗೊಳಿಸಿದರು. ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಎಡಿಸಿ ಸಿದ್ದರಾಮೇಶ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಇತರರಿದ್ದರು.
Published on

ಗಂಗಾವತಿ: ಓದುವುದರಿಂದ ಅಭಿವ್ಯಕ್ತಿ ರೂಪುಗೊಳ್ಳಲಿದ್ದು, ಹಿರಿಯ ಬರಹಗಾರರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.

ನಗರದ ಕಸಾಪ ಭವನದಲ್ಲಿ ಕಸಾಪ ಜಿಲ್ಲಾ ಘಟಕ, ಇಂದಿರೇಶ ಪ್ರಕಾಶನದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಎನ್ನುವುದು ತಪಸ್ಸು ಇದ್ದಂತೆ. ಹದಯದ ಭಾವನೆ, ಬಾಳಿನ ಅನುಭವ ಬರಹಕ್ಕೆ ಶಕ್ತಿ ತುಂಬಲಿದೆ. ಸುತ್ತಲಿನ ಪರಿಸರದ ಅನುಭವ, ಸಾಮಾಜಿಕ ಮೌಢ್ಯಗಳನ್ನು ಕಟ್ಟಿಕೊಡುವ ಕೆಲಸವಾಗಬೇಕಿದೆ. ಬಿಡುಗಡೆಗೊಂಡ ‘ದೇಸಿಗಿತಿ’ ಕಾದಂಬರಿಯಲ್ಲಿ ಹೆಣ್ಣಿನ ನೋವುಗಳನ್ನು ಚಿತ್ರಿಸಲಾಗಿದೆ ಎಂದರು.

ಎಡಿಸಿ ಸಿದ್ದರಾಮೇಶ ಮಾತನಾಡಿ, ಕಣ್ಣಿಗೆ ಕಾಣುವ ಅನುಭವಗಳನ್ನು ಸಾಹಿತ್ಯದ ಮೂಲಕ ದಾಖಲೀಕರಿಸಿ, ಹೊಸತನಕ್ಕೆ ಅವಕಾಶ ನೀಡಬೇಕು. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ, ಸಾಹಿತ್ಯದಲ್ಲೂ ಕ್ರಿಯಾಶೀಲರಾಗಿರುವ ಲೇಖಕ ಹಾಲೇಶ ಗುಂಡಿ ಅವರ ಸಾಹಿತ್ಯ ಪಯಣ ಸಾಗಲಿ ಎಂದರು.

ಕಾದಂಬರಿ ಕುರಿತು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಮಾತನಾಡಿದರು. ಕಂದಾಯ ಇಲಾಖೆ ನೌಕರ ಹಾಲೇಶ ಗುಂಡಿ ಬರೆದ ದೇಸಿಗಿತಿ ಕಾದಂಬರಿ ಬಿಡುಗಡೆಗೊಳಿಸಲಾಯಿತು.

ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್, ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಶಂಕರ್, ಲೇಖಕ ಹಾಲೇಶ ಗುಂಡಿ,ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಭೀಮಸೇನ್ ರಾವ್, ಉಪನ್ಯಾಸಕರಾದ ಪವನಕುಮಾರ ಗುಂಡೂರು, ಶಿವಾನಂದ ತಿಮ್ಮಾಪುರ, ಶ್ರೀನಿವಾಸ ಅಂಗಡಿ, ರಮೇಶ ಬಾಳಿಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net