ಆರ್ಥಿಕ ವ್ಯವಹಾರಕ್ಕೆ ಅರ್ಥಶಾಸ್ತ್ರ ಅಗತ್ಯ

UDGHATANE
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಅರ್ಥಶಾಸ ವಿಷಯದ ಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಜಗದೀಶ ಬುಧವಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಜಗದೀಶ್ ಬೆಂಗಳೂರು, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಪ್ರಾಚಾರ್ಯ ಟಿ.ಸಿ.ಶಾಂತಪ್ಪ, ಹಿರಿಯ ಉಪನ್ಯಾಸಕ ಸೋಮಶೇಖರ್‌ಗೌಡ ಇತರರಿದ್ದರು.
Published on

ಗಂಗಾವತಿ: ದೈನಂದಿನ ಬದುಕಿನ ಆರ್ಥಿಕ ವ್ಯವಹಾರ ಕಲಿಸಿಕೊಡುವ ಅರ್ಥಶಾಸ ವಿಷಯ, ಮಾನವೀಯ ವರ್ತನೆಯ ಅಧ್ಯಯನಕ್ಕೂ ಆದ್ಯತೆ ನೀಡಲಿದೆ ಎಂದು ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಜಗದೀಶ ಹೇಳಿದರು.

ನಗರದ ಬಾಲಕರ ಸ.ಪ.ಪೂ. ಕಾಲೇಜಿನಲ್ಲಿ ಪಿಯು ಶಿಕ್ಷಣ ಇಲಾಖೆಯಿಂದ ಉಪನ್ಯಾಸಕರಿಗೆ ಬುಧವಾರ ಹಮ್ಮಿಕೊಂಡಿದ್ದ ಅರ್ಥಶಾಸ ವಿಷಯದ ಲಿತಾಂಶ ಸುಧಾರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ನಾವು ಹೇಗೆ ಸದ್ಬಳಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕೆನ್ನುವುದನ್ನು ಅರ್ಥಶಾಸ ತಿಳಿಸಲಿದೆ.

ಸಂಪನ್ಮೂಲ ಕೊರತೆ ಸಂದರ್ಭದಲ್ಲಿ ಅವಶ್ಯಕತೆಗಳನ್ನು ನಿಭಾಯಿಸಲು ಅರ್ಥಶಾಸ ಕಲಿಸಲಿದೆ. ಇಂಥ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅರ್ಥಶಾಸ ವಿಷಯದ ಬಗ್ಗೆ ಆಸಕ್ತಿ ಹೆಚ್ಚಿಸಬೇಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಭದ್ರಗೊಳಿಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಜಗದೀಶ್ ಬೆಂಗಳೂರು ಉಪನ್ಯಾಸ ನೀಡಿದರು. ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಪ್ರಾಚಾರ್ಯ ಟಿ.ಸಿ.ಶಾಂತಪ್ಪ, ಹಿರಿಯ ಉಪನ್ಯಾಸಕರಾದ ಸೋಮಶೇಖರ್‌ಗೌಡ, ರಮೇಶ್ ಹೇಮರೆಡ್ಡಿ, ರಾಜಶೇಖರ್ ಪಾಟೀಲ್, ಶಿವಪ್ಪ ಬೇಲೆರಿ, ರಮೇಶ್ ಗಬ್ಬೂರ್, ಅಂಬರೀಷ್ ದೇವರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net