

ಗಂಗಾವತಿ: ಪತ್ರಕರ್ತ ಮತ್ತು ಪತ್ರಿಕೋದ್ಯಮದ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವ ತೆಲಂಗಾಣ ಸಿಎಂ ರೇವಂತರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸುನೀಲ್ ಕುಲ್ಕರ್ಣಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ರಮೇಶ ಕೋಟಿ ಮಾತನಾಡಿ, ಅಧಿಕಾರಕ್ಕೆ ಬರುವ ಮುನ್ನ ಜನಪ್ರತಿನಿಧಿಗಳು ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಬಳಸಿಕೊಳ್ಳುತ್ತಿದ್ದು, ಒಂದು ಹಂತಕ್ಕೆ ಬಂದ ನಂತರ ನಿರ್ಲಕ್ಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ತೆಲಂಗಾಣ ಸಿಎಂ ರೇವಂತರೆಡ್ಡಿ ಇದೇ ರೀತಿ ವರ್ತಿಸಿದ್ದು, ಯುವ ಪರ್ತಕರ್ತರ ವರ್ತನೆ ನೋಡಿದರೆ ಕೆನ್ನೆಗೆ ಬಾರಿಸಬೇಕೆನುಸುತ್ತದೆ ಎಂದು ಉಡಾೆ ಹೇಳಿಕೆ ನೀಡಿದ್ದು ಸರಿಯಲ್ಲ. ಸಮಾಜದ ಪರಿವರ್ತನೆಯಲ್ಲಿ ಪರ್ತಕರ್ತರ ಶ್ರಮ ಸಾಕಷ್ಟಿದ್ದು, ಹಗಲಿರುಳು ದುಡಿಯುತ್ತಿದ್ದಾರೆ. ಅವರ ಬಗ್ಗೆ ಮಾತನಾಡಿರುವ ರೇವಂತರೆಡ್ಡಿ ವಿರುದ್ಧ ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕಿದ್ದು, ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಸಿ.ಡಿ.ರಾಮಕೃಷ್ಣ, ಚನ್ನಬಸವ ಮಾನ್ವಿ, ಸೋಮನಾಥ, ಮಾರ್ಕಂಡಯ್ಯ ಇದ್ದರು.