ಸೃಜನಾತ್ಮಕ ಚಟುವಟಿಕೆಯಿಂದ ಕಲಿಕಾ ಮಟ್ಟ ಹೆಚ್ಚಳ

Workshop
ಗಂಗಾವತಿ ತಾಲೂಕಿನ ಬಸಾಪಟ್ಟಣದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಕಲಿಕಾ ಚಾರ್ಟ್‌ಗಳನ್ನು ಡಿಡಿಪಿಐ ಶ್ರೀಶೈಲ ಬಿರಾದಾರ್ ಬಿಡುಗಡೆ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ಸೇವಾದಳ ಜಿಲ್ಲಾ ಸಂಘಟಕ ಎಚ್.ಕುಮಾರಸ್ವಾಮಿ ಬಳ್ಳಾರಿ, ತಾಲೂಕು ಅಧಿನಾಯಕ ಶಿವಾನಂದ ತಿಮ್ಮಾಪೂರ ಇತರರಿದ್ದರು.
Published on

ಗಂಗಾವತಿ: ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆಗೆ ಜಿಲ್ಲೆಯ ಪ್ರೌಢಶಾಲೆ ಶಿಕ್ಷಕರು ಹಲವು ಯೋಜನೆ ರೂಪಿಸಿದ್ದು, ಸೃಜನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ್ ಹೇಳಿದರು.

ತಾಲೂಕಿನ ಬಸಾಪಟ್ಟಣದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾರತ ಸೇವಾದಳ ಮತ್ತು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ನಾಯಕತ್ವ ಶಿಬಿರ ಮತ್ತು ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಫಲಿತಾಂಶ ಸುಧಾರಣೆಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲಾಖೆಯಿಂದ ರೂಪಿಸಿದ ವಿಶೇಷ ತರಗತಿ, ಗುಂಪು ಅಧ್ಯಾಯನ, 20 ಅಂಶಗಳ ಕಾರ್ಯಕ್ರಮ, ಪೂರ್ವಸಿದ್ಧತಾ ಪರೀಕ್ಷೆ, ಭೌತಿಕ ಸೌಕರ್ಯಗಳು ಸೇರಿ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಬಡ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು. ನಂತರ ಕಲಿಕಾ ಚಾರ್ಟ್‌ಗಳನ್ನು ಬಿಡುಗಡೆ ಮಾಡಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ಸೇವಾದಳ ಜಿಲ್ಲಾ ಸಂಘಟಕ ಎಚ್.ಕುಮಾರಸ್ವಾಮಿ ಬಳ್ಳಾರಿ, ತಾಲೂಕು ಅಧಿನಾಯಕ ಶಿವಾನಂದ ತಿಮ್ಮಾಪೂರ, ಪ್ರಭಾರಿ ಮುಖ್ಯಶಿಕ್ಷಕ ಹನುಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net