ಗ್ರಾಪಂ ಅಧಿಕಾರವಧಿಯ ಮೀಸಲು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದೆಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕಿಶೋರ ವಿಕಾಸ

12012021 Gangavati GP Reserve Process
Published on

ಗಂಗಾವತಿ: ಗ್ರಾಪಂ ಅಧಿಕಾರವಧಿಯ ಮೀಸಲು ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ನಿರ್ವಹಿಸಲಾಗಿದ್ದು, 25 ವರ್ಷದ ವಿವಿಧ ಅವಧಿಯ ಮೀಸಲು ಅವಲೋಕಿಸಿ ನಿಗದಿಪಡಿಸಲಾಗಿದೆ ಎಂದು ಡಿಸಿ ಕಿಶೋರ ವಿಕಾಸ ಹೇಳಿದರು.

ನಗರದ ಶಿವೆ ಥಿಯೇಟರ್‌ನಲ್ಲಿ ತಾಲೂಕು ಆಡಳಿತ ಮಂಗಳವಾರ ಆಯೋಜಿಸಿದ್ದ ಗ್ರಾಪಂ ಅಧಿಕಾರ ಅವಧಿಯ ಮೀಸಲು ನಿಗದಿ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಸ್ಟರ್ ಪದ್ಧತಿಯಂತೆ ಮೀಸಲು ನಿಗದಿಪಡಿಸಲಾಗಿದ್ದು, ಕೆಲವನ್ನು ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಅಧಿಕಾರ ವಿಕೇಂದ್ರಿಕರಣವನ್ನು ಸಮರ್ಪಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.

ಪ್ರೊಬೆಷನರಿ ಐಎಎಸ್ ಅಧಿಕಾರಿ ವರ್ಣಿತ್ ನೇಗಿ, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಚುನಾವಣೆ ಶಿರಸ್ತೇದಾರ ಅನಂತ ಜೋಶಿ, ಸಹಾಯಕರಾದ ಶರಣಪ್ಪ, ಎಂ.ಡಿ.ರಫೀ ಇತರರಿದ್ದರು.

ನಿರಾಶೆ: ಬಹು ನಿರೀಕ್ಷೆಯಿಂದ ಬಂದಿದ್ದ ಬಹುತೇಕ ಸದಸ್ಯರಿಗೆ ನಿರಾಶೆಯಾಗಿದ್ದು, ಲಾಟರಿ ಪ್ರಕ್ರಿಯೆಯಲ್ಲೂ ಸೋತಿದ್ದರಿಂದ ಗೊಣಗುತ್ತಲೇ ಸಭೆಯಿಂದ ಹೊರನಡೆದರು. ತಾಲೂಕಿನ ಅತಿ ಸಣ್ಣ ಗ್ರಾಪಂ ಸಣಾಪುರಕ್ಕೆ ಎಸ್ಟಿ ಮೀಸಲು ನಿಗದಿಯಾಗಿದ್ದು, ಅವಿರೋಧ ಆಯ್ಕೆಯಾಗಿದ್ದ ಹನುಮನಹಳ್ಳಿಯ ದುರ್ಗಮ್ಮ ಒಬ್ಬರೇ ಇದ್ದರಿಂದ ಅಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ಖಚಿತವಾಯಿತು. 10 ಬಾರಿ ಗ್ರಾಪಂಗೆ ಆಯ್ಕೆಯಾಗಿದ್ದ ರೆಡ್ಡಿ ವೀರರಾಜು ಮತ್ತೆ ನಿರಾಶೆಯಾಗಿದ್ದು, ಹಿಂದುಳಿದ ವರ್ಗ ಎ ಮಹಿಳೆ ಮೀಸಲು ಬಂದಿದ್ದರಿಂದ ಅಧ್ಯಕ್ಷ ಸ್ಥಾನ ಈ ಬಾರಿಯೂ ಒಲಿಯಲಿಲ್ಲ. ಅತಿದೊಡ್ಡ ಗ್ರಾಪಂ ವಡ್ಡರಹಟ್ಟಿ ಸಾಮಾನ್ಯ ಮೀಸಲು ಬಂದಿದ್ದರಿಂದ ೋಷಣೆಯಾಗುತ್ತಿದ್ದಂತೆ ಸದಸ್ಯರನ್ನು ಹೈಜಾಕ್ ಮಾಡಲಾಗಿದ್ದು, ಬೆಂಬಲಿಸುವ ಸದಸ್ಯರಿಗೆ ಲಕ್ಷ ರೂ.ಅಮಿಷವೊಡ್ಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net