

ಗಂಗಾವತಿ: ಕರೊನಾ ನಿಯಂತ್ರಣಕ್ಕಾಗಿ ನಗರದಲ್ಲಿ ಲಾಕ್‌ಡೌನ್ ಅನಿವಾರ್ಯವಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಲಾಕ್‌ಡೌನ್ ನಿಮಿತ್ತ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ, ಪಿಡಿಒ ಮತ್ತು ವ್ಯಾಪಾರಸ್ಥರ ಜಂಟಿ ಸಭೆಯಲ್ಲಿ ಮಾತನಾಡಿದರು. ನಗರ ಸೇರಿ ತಾಲೂಕಿನ ಹೇರೂರು, ಶ್ರೀರಾಮನಗರ, ಕಾರಟಗಿ ಭಾಗದಲ್ಲಿ ಹಣವಾಳ ಮತ್ತು ಮರ್ಲಾನಹಳ್ಳಿಯಲ್ಲಿ 10 ದಿನದವರೆಗೂ ಲಾಕ್‌ಡೌನ್ ೋಷಿಸಿದೆ. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಕರ್ಪ್ಯೂ ಜಾರಿ ಹಿನ್ನೆಲೆಯಲ್ಲಿ ಅನಗತ್ಯ ತಿರುಗಾಡುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ವಾರಂಟೈನ್‌ಗೊಳಪಡಿಸಲಾಗುವುದು. ಪ್ರತಿ ವಾರ್ಡ್‌ಗೆ ಮೂವರು ಅಧಿಕಾರಿಯನ್ನೊಳಗೊಂಡ ತಂಡ ರಚಿಸಿದ್ದು, ಸಾರ್ವಜನಿಕರಿಗೆ ನೆರವಾಗಲಿದ್ದಾರೆ ಎಂದರು.
ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ್ ಮಾತನಾಡಿ, 10 ದಿನದ ಕಾಲ್‌ಡೌನ್‌ಗೆ ಎಲ್ಲರೂ ಸಹಕರಿಸಬೇಕು. ಜನಜಂಗುಳಿ ಸೇರಿಸುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರೇಡ್2 ತಹಸೀಲ್ದಾರ್ ಶಿವರಾಜ್, ತಾಪಂ ಇಒ ಡಾ.ಮೋಹನ್, ನಗರಸಭೆ ಪೌರಾಯುಕ್ತ ಶೇಖರಪ್ಪ ಈಳಿಗೇರ್, ಬಿಇಒ ಸೋಮಶೇಖರಗೌಡ, ನಗರ ಪಿಐ ವೆಂಕಟಸ್ವಾಮಿ, ಗ್ರಾಮೀಣ ಸಿಪಿಐ ಸುರೇಶ ತಳವಾರ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ್, ದತ್ತಾತ್ರೇಯ ಹೆಗಡೆ ಇತರರಿದ್ದರು.
ಜಾಗೃತಿ ಜಾಥಾ: ಕರೊನಾ ಮುಂಜಾಗ್ರತೆ ಕ್ರಮಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಹಣವಾಳದಲ್ಲಿ ಗ್ರಾಪಂ ಸಿಬ್ಬಂದಿಯಿಂದ ಗ್ರಾಮಾದ್ಯಂತ ಜಾಗೃತಿ ಮೂಡಿಸಲಾಯಿತು. ಗ್ರಾಪಂ ಪಿಡಿಒ ಯು.ಮಲ್ಲಿಕಾರ್ಜುನ, ಕಾರ್ಯದರ್ಶಿ ಪಂಪಾಪತಿ ಬೆನಕನಾಳ್, ಮಲ್ಲೇಶಪ್ಪ, ಗವಿಸಿದ್ದಪ್ಪ ಇತರರಿದ್ದರು.
ಮುಂಜಾಗ್ರತೆ ಕ್ರಮಗಳ ಹಿನ್ನೆಲೆಯಲ್ಲಿ ಲಾಕ್‌ಡೌನ್ ೋಷಿಸಿದ್ದು, ಅನಗತ್ಯ ತಿರುಗಾಡುವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.| ಡಾ.ಬಿ.ಪಿ.ಚಂದ್ರಶೇಖರ್ ಡಿವೈಎಸ್ಪಿ, ಗಂಗಾವತಿ