

ಗಂಗಾವತಿ: ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕಿದ್ದು, ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಹೇಳಿದರು.
ತಾಲೂಕಿನ ಹೊಸಳ್ಳಿ ಶ್ರೀ ಬೀರಲಿಂಗೇಶ್ವರ ಸಮುದಾಯದ ಭವನದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಗಂಗಾವತಿ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾಲೋಚನೆ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದು, ಶೇ.90 ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭವಾಗಿದೆ. ಯೋಜನೆ ಬಗ್ಗೆ ಕಾರ್ಯಕರ್ತರ ಪ್ರಚಾರ ಕೈಗೊಳ್ಳಬೇಕಿದ್ದು, ಪಕ್ಷದ ಸಂಘಟನೆಯತ್ತ ಗಮನಹರಿಸಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಲಾನುಭವಿಗಳ ಮೂಲಕವೇ ಉತ್ತರ ನೀಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರು, ಕ್ಷೇತ್ರದಲ್ಲಾಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಿದರು. ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ, ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಸದಸ್ಯರಾದ ಖಾಸೀಂಸಾಬ್ ಗದ್ವಾಲ್, ಹುಲಿಗೆಮ್ಮ ಕಿರಿಕಿರಿ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕಾಧ್ಯಕ್ಷ ಡಾ.ಕೆ. ವೆಂಕಟೇಶಬಾಬು, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಮುಖಂಡರಾದ ಯಮನಪ್ಪ ವಿಠಲಾಪುರ, ದೇವಪ್ಪ ಬಾವಿಕಟ್ಟಿ, ಸಣ್ಣಕ್ಕಿ ನೀಲಪ್ಪ, ಬಿ.ಕೀರಯ್ಯ, ನೀಲಕಂಠಪ್ಪ ಹೊಸಳ್ಳಿ, ಜುಬೇರ್, ಸಾಜೀದ್, ಸನ್ನಿಕ್ ಇತರರಿದ್ದರು.
ಮೃತ ರೈತ ಕುಟುಂಬಕ್ಕೆ ನೆರವು: ಭೂ-ಸಾಲ ವ್ಯಾಜ್ಯದಿಂದ ವಿಷ ಪ್ರಾಶನದಿಂದ ಮೃತಪಟ್ಟ ತಾಲೂಕಿನ ಆಚಾರನರಸಾಪುರದ ಈರಪ್ಪ ಮತ್ತು ಯಲ್ಲಪ್ಪ ಹಿರೇಕುರುಬರ್ ನಿವಾಸಕ್ಕೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಸೋಮವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಮಾಹಿತಿ ಪಡೆದುಕೊಂಡರಲ್ಲದೇ ಮೃತ ಯಲ್ಲಪ್ಪನ ಮಕ್ಕಳ ಶಿಕ್ಷಣಕ್ಕಾಗಿ 2 ಲಕ್ಷ ರೂ. ನೆರವು ನೀಡಿದರು.