ಕಾಂಗ್ರೆಸ್ ಪಕ್ಷ ಮೊದಲಿನಂಗ್ಲಿಲ

Congress meeting
ಗಂಗಾವತಿ ಸರೋಜ ನಿವಾಸದಲ್ಲಿ ಕೆಪಿಸಿಸಿ ಹಿಂದುಳಿದ ಘಟಕದಿಂದ ಆಯೋಜಿಸಿದ್ದ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ ಮುಸ್ಟೂರುಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಶನಿವಾರ ಆಯ್ಕೆ ಪತ್ರ ವಿತರಿಸಿದರು. ಮುಖಂಡರಾದ ಹನುಮಂತರಾಯ, ವೀರನಗೌಡ, ನಾಜನೀನ್, ಯಮನಪ್ಪ, ಸುರೇಶ ಯಮನಪ್ಪ, ಆರ್.ಕೆ.ಯರಿಸ್ವಾಮಿ, ಚಂದ್ರಶೇಖರ ಇತರರಿದ್ದರು.
Published on

ಗಂಗಾವತಿ: ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ತಾರತಮ್ಯ ನೀತಿ ಹೆಚ್ಚಾಗುತ್ತಿದ್ದು, ಮೊದಲಿನ ಕಾಂಗ್ರೆಸ್ ಪಕ್ಷವಿಲ್ಲ ಎಂದು ಮಾಜಿ ಎಂಎಲ್ಸಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಹೇಳಿದರು.

ನಗರದ ಸರೋಜನಗರ ಆವರಣದಲ್ಲಿ ಕಾಂಗ್ರೆಸ್ ಹಿಂದುಳಿದ ಘಟಕದಿಂದ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರಂತ ಪ್ರಮುಖರು ಕ್ಷೇತ್ರದಲ್ಲಿ ಬಂದು ಹೋಗಿದ್ದು, ಸಂಘಟನೆ ಗಟ್ಟಿಯಾಗಿತ್ತು.

ಪಕ್ಷದ ಪ್ರಮುಖ ಮುಖಂಡರು ಎಚ್‌ಆರ್‌ಜಿ ನಿವಾಸದಲ್ಲಿ ಪಕ್ಷದ ಸಂಘಟನೆ ಮತ್ತು ಸಾಮೂಹಿಕ ನಾಯಕತ್ವದ ಕುರಿತು ಚರ್ಚಿಸಲಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಬದಲಾಗಿದ್ದು, ಒಬ್ಬರಿಗೆ ಮಣೆ ಹಾಕುವಂತ ಸ್ಥಿತಿ ಬಂದಿದೆ. ನಾಮನಿರ್ದೇಶನದಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದ್ದು, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಶೀಘ್ರವೇ ರಾಜ್ಯದ ಹೈಕಮಾಂಡ್‌ನೊಂದಿಗೆ ಕ್ಷೇತ್ರದಲ್ಲಾಗುತ್ತಿರುವ ವಾಸ್ತವ ಸ್ಥಿತಿ ಕುರಿತು ಚರ್ಚಿಸಲಾಗುವುದು. ಅನ್ಯಾಯ ಸರಿಪಡಿಸಲು ಯತ್ನಿಸಲಾಗುವುದು ಎಂದರು.

ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರು ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಹಿಂದುಳಿದ ಘಟಕ ಸಮರ್ಥವಾಗಿದ್ದು, ಸದಸ್ಯರ ಸಂಖ್ಯೆಯೂ ಹೆಚ್ಚಾಗಿದೆ. ಪಕ್ಷ ಸಂಘಟನೆ ಜತೆಗೆ ಕಾರ್ಯಕರ್ತರಿಗೆ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರ್‌ಗೆ ಆಯ್ಕೆ ಪತ್ರ ವಿತರಿಸಲಾಯಿತು. ಮುಖಂಡರಾದ ಹನುಮಂತರಾಯ, ವೀರನಗೌಡ, ನಾಜನೀನ್, ಯಮನಪ್ಪ, ಸುರೇಶ ಯಮನಪ್ಪ, ಆರ್.ಕೆ.ಯರಿಸ್ವಾಮಿ, ಚಂದ್ರಶೇಖರ, ಲಕ್ಷ್ಮಣ, ವಿರುಪಣ್ಣ, ಹೇಮಂತ, ಮಂಜುನಾಥ, ರಾಘವೇಂದ್ರ, ಗಂಗಣ್ಣ ಹೇರೂರು, ಶರಣಪ್ಪ, ಐಯ್ಯಪ್ಪ ಸಂಗಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net