

ಗಂಗಾವತಿ: ನಗರದ ಸಿಐಟಿಯು ಕಚೇರಿಯಲ್ಲಿ ಆಯೋಜಿಸಿದ್ದ ಎಸ್‌ಎ್ಐ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು.
ಶೈಕ್ಷಣಿಕ, ವಸತಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಗಮನಹರಿಸುವುದರ ಜತೆಗೆ ಪರಿಹಾರಕ್ಕಾಗಿ ಪರಿಣಾಮಕಾರಿ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಸಮಿತಿಗೆ ಶಿವಕುಮಾರ ಈಚನಾಳ್ (ಅಧ್ಯಕ್ಷ), ಬಾಲಾಜಿ ಚಳ್ಳಾರಿ (ಕಾರ್ಯದರ್ಶಿ), ಯು.ನಾಗರಾಜ್, ಹನುಮೇಶ ಮ್ಯಾಗಡಿ, ಎಂ.ಪಿ.ಶರ್ೀ, ಪೂಜಾ ಕೊಪ್ಪಳ (ಉಪಾಧ್ಯಕ್ಷರು),ಬಿ.ರೋಜಾ, ದರ್ಶನ್ ಹೊಸ್ಕೇರಾ, ಬಸಯ್ಯ ಹಿರೇಮಠ (ಜಂಟಿ ಕಾರ್ಯದರ್ಶಿಗಳು), ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು ಕೊಪ್ಪಳ, ಮೌನೇಶ್ ಕುಷ್ಟಗಿ, ದೀಪಾ ಛಲುವಾದಿ, ವೈಶಾಲಿ ಹಣವಾಳ, ಲಕ್ಷ್ಮಣ ಹೊಸಗುಡ್ಡ, ಬಿ. ಶರಣಬಸವ (ಸದಸ್ಯರು) ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣ ಹೆಚ್ಚುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಶಿಕ್ಷಣ ಕ್ಷೇತ್ರ ಬಲಪಡಿಸುವುದರ ಜತೆಗೆ ಪ್ರಮುಖ ಸಮಸ್ಯೆಗಳಾದ ಡೊನೇಷನ್ ಹಾವಳಿ, ಗ್ರಾಮೀಣ ಬಸ್ ಸಂಚಾರಕ್ಕಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು, ಪರಿಣಾಮಕಾರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.