ಕಾಲನಿಗಳ ಸ್ವಚ್ಛತೆಯತ್ತ ಗಮನಹರಿಸಲು ಡಿಸಿಎಂ ಲಕ್ಷ್ಮಣ ಸವದಿ ಸಲಹೆ

021220 Gangavati 4th Ward Sharadambe Namebord Innaguration
ಗಂಗಾವತಿ 4ನೇ ವಾರ್ಡ್‌ನ ಶಾರದಾ ನಗರದಲ್ಲಿ ಶಾರದಾಂಬೆ ನಾಮಲಕವನ್ನು ಡಿಸಿಎಂ ಲಕ್ಷ್ಮಣ ಸವದಿ ಮಂಗಳವಾರ ಅನಾವರಣಗೊಳಿಸಿದರು.
Published on

ಗಂಗಾವತಿ: ಕಾಲನಿಗಳ ಸ್ವಚ್ಛತೆಯತ್ತ ಗಮನಹರಿಸಬೇಕಿದ್ದು, ಪರಿಸರ ಸಂರಕ್ಷಣೆಗೆ ಸಮಯ ಮೀಸಲಿಡುವಂತೆ ಡಿಸಿಎಂ ಲಕ್ಷ್ಮಣ ಸವದಿ ಸಲಹೆ ನೀಡಿದರು.

ನಗರದ 4ನೇ ವಾರ್ಡ್‌ನ ಶಾರದಾ ನಗರದಲ್ಲಿ ಶಾರದಾಂಬೆ ನಾಮಲಕವನ್ನು ಮಂಗಳವಾರ ಅನಾವರಣಗೊಳಿಸಿ ಮಾತನಾಡಿದರು. ಸುಸಜ್ಜಿತ ಕಟ್ಟಡ ಮತ್ತು ಕಾಲನಿಗಳಿಗೆ ನಾಮಕರಣ ಮಾಡಿದರೆ ಸಾಲದು. ಮರಗಳನ್ನು ಬೆಳೆಸುವುದರ ಜತೆಗೆ ಪರಿಸರ ರಕ್ಷಣೆಗೆ ಗಮನಹರಿಸಬೇಕು. ಘನತ್ಯಾಜ್ಯ ವಿಲೇವಾರಿ ಸುಗಮಗೊಳಿಸಬೇಕಿದ್ದು, ಎಲ್ಲೆಂದರಲ್ಲಿ ಕಸ ಹಾಕಬಾರದು ಎಂದು ಸಲಹೆ ನೀಡಿದರು.

ವಾರ್ಡ್‌ನಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮುಖಂಡ ಚಂದ್ರುನೌಡಗೌಡ ನೇತೃತ್ವದಲ್ಲಿ ಮುಖಂಡರು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು. ಪೂರ್ವ ನಿಯೋಜಿತ ಕಾರ್ಯಕ್ರಮ ಇಲ್ಲದ ಕಾರಣ ಬಂದೋಬಸ್ತ್ ಮಾಡಲು ಪೊಲೀಸರಿಗೆ ತೊಂದರೆಯಾಯಿತು. ಕಾರಟಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಶಾರದಾಂಬೆ ನಗರದ ಉದ್ಯಮಿ ಚಂದ್ರುನಾಡಗೌಡ ಒತ್ತಾಯದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅರಣ್ಯ ಸಚಿವ ಆನಂದ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಜವಳಿ ಉದ್ಯಮಿ ಚಂದ್ರು ನಾಡಗೌಡ, ಮುಖಂಡರಾದ ಈಶ್ವರ ಕಟಗಿಹಳ್ಳಿ, ಶರಣಪ್ಪ ನಾಗೋಜಿ, ವೀರೇಶ ಬಲ್ಕುಂದಿ, ಅಯ್ಯನಗೌಡ ಕೆಂಚಮ್ಮನವರ್, ಶರಣಪ್ಪ ಕಲ್ಗುಡಿ, ಭೀಮಜ್ಜ ಮುರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net