

ಗಂಗಾವತಿ: ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ.ಪೂ.ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ತಾಲೂಕಿನ ಶ್ರೀರಾಮನಗರ, ಗಂಗಾವತಿ ಮತ್ತು ವಡ್ಡರಹಟ್ಟಿಯ ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದ ಗುಂಪು ಆಟಗಳಾದ ಹ್ಯಾಂಡ್‌ಬಾಲ್, ಬಾಸ್ಕೇಟ್‌ಬಾಲ್, ನೆಟ್‌ಬಾಲ್, ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್ ಹಾಗೂ ಬಾಲಕಿಯರ ವಿಭಾಗದ ಹ್ಯಾಂಡ್‌ಬಾಲ್, ಥ್ರೋಬಾಲ್, ವಾಲಿಬಾಲ್ ಮತ್ತು ರಿಲೆ ವಿಭಾಗದಲ್ಲಿ (ಪ್ರಥಮ) ಸ್ಥಾನ ಪಡೆದಿದ್ದಾರೆ. ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ 1500ಮೀಟರ್ ಓಟದಲ್ಲಿ ಪ್ರಿಯಾಂಕಾ, ಹರ್ಡಲ್ಸ್ ಮತ್ತು ಟ್ರಿಪಲ್ ಜಂಪ್‌ನಲ್ಲಿ ಪವಿತ್ರಾ, ಜುಡೋ ವಿಭಾಗದಲ್ಲಿ ನಕ್ಷಿತಾ, ಕರಾಟೆ 68 ಕೆ.ಜಿ. ವಿಭಾಗದಲ್ಲಿ ಮಹಾಲಕ್ಷ್ಮೀ (ಪ್ರಥಮ), 44 ಕೆ.ಜಿ ವಿಭಾಗದಲ್ಲಿ ನಕ್ಷಿತಾ (ದ್ವೀತಿಯ), ಗುಂಡು ಮತ್ತು ಹ್ಯಾಮರ್ ಎಸೆತದಲ್ಲಿ ಹಾರಿಕಾ (ಪ್ರಥಮ), ತ್ರಿಪಲ್ ಜಂಪ್ ಮತ್ತು ಎತ್ತರ ಜಿಗಿತದಲ್ಲಿ ರೇಖಾ, 100 ಮೀಟರ್ ಓಟದಲ್ಲಿ ವಿಜಯಲಕ್ಷ್ಮೀ, ಜಾವಲಿನ್ ಥ್ರೋನಲ್ಲಿ ಪ್ರಣಿತಾ (ದ್ವೀತಿಯ) ಸ್ಥಾನ ಪಡೆದಿದ್ದಾರೆ.
ಬಾಲಕರ ವೈಯಕ್ತಿದ ವಿಭಾಗದ ಕರಾಟೆ 58 ಕೆಜಿ ವಿಭಾಗದಲ್ಲಿ ಕೃಷ್ಣ, 70 ಕೆಜಿ ವಿಭಾಗದಲ್ಲಿ ಮಹೇಶ ಕುಮಾರ, 62 ಕೆಜಿ ವಿಭಾಗದಲ್ಲಿ ಶರಣೇಗೌಡ, 45 ಕೆಜಿ ವಿಭಾಗದಲ್ಲಿ ಸಂಪತ್ ಗೌಡ, 54 ಕೆಜಿ ವಿಭಾಗದಲ್ಲಿ ನಾಗರಾಜ, 82 ಕೆಜಿ ವಿಭಾಗದಲ್ಲಿ ಶರತ್ (ಪ್ರಥಮ), ಸುರೇಂದ್ರ, ಕುಮಾರ ಬುದ್ದಿಪಾಷಾ, ಶರಣ, ರೋಹಿತ್, ನಾಗರಾಜ ಮತ್ತು ಶರಣಬಸವ (ದ್ವೀತಿಯ) ಸ್ಥಾನ, ಜಂಪ್‌ರೋಪ್‌ನಲ್ಲಿ ಸಮರ್ಥ (ಪ್ರಥಮ), ಡಿಸ್ಕಸ್ ಎಸೆತದಲ್ಲಿ ಸುಹಾಸ್(ಪ್ರಥಮ), ಹ್ಯಾಮರ್ ಮತ್ತು ಗುಂಡು ಎಸೆತದಲ್ಲಿ (ದ್ವೀತಿಯ), ಗುಂಡು ಎಸೆತದಲ್ಲಿ ರಾಂಕುಮಾರ (ಪ್ರಥಮ), ಹ್ಯಾಮರ್ ಎಸೆತದಲ್ಲಿ (ದ್ವೀತಿಯ), ಎತ್ತರ ಜಿಗಿತದಲ್ಲಿ ಕೆ. ರೋಹಿತ್, ಹರ್ಡಲ್ಸ್‌ನಲ್ಲಿ ಶ್ರವಂತ್‌ರೆಡ್ಡಿ (ದ್ವೀತಿಯ) ಸ್ಥಾನ ಪಡೆದ್ದಿದಾರೆ.
ನಗರದ ವಿದ್ಯಾನಿಕೇತನ ಪಿ.ಯು ಕಾಲೇಜು ವಿದ್ಯಾರ್ಥಿಗಳು ುಟ್‌ಬಾಲ್, ಬಾಲಕಿಯರು ಬಾಸ್ಕೇಟ್‌ಬಾಲ್, ನೆಟ್‌ಬಾಲ್ ವಿಭಾಗದಲ್ಲಿ (ಪ್ರಥಮ), ಚೆಸ್‌ನಲ್ಲಿ ಇ.ಅನುಷಾ, ಬಿ. ಚಿನ್ಮಯಾ, ಪ್ರೀತಿ (ಪ್ರಥಮ), ತಾಲೂಕಿನ ವಡ್ಡರಹಟ್ಟಿ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜು ಬಾಲಕಿಯರು ುಟ್‌ಬಾಲ್ ವಿಭಾಗದಲ್ಲಿ (ಪ್ರಥಮ), ವಡ್ಡರಹಟ್ಟಿಯ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಅಶ್ವಿನಿ ಚೆಸ್ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ತಿಳಿಸಿದ್ದಾರೆ.