ಗಂಗಾವತಿ ಸಿಟಿ ಮಾರುಕಟ್ಟೆಗೆ ಗ್ರಾಮದೇವತೆ ಹೆಸರಿಡಿ: ನಗರಸಭೆ ಪೌರಾಯುಕ್ತಗೆ ದೇವಾಲಯ ಸಮಿತಿ ಮನವಿ

010122 Gangavati City market Name Chanege Appeal
ಗಂಗಾವತಿಯ ಗುಂಡಮ್ಮ ಕ್ಯಾಂಪ್‌ನಲ್ಲಿ ಆರಂಭಿಸಿರುವ ಸಿಟಿ ಮಾರುಕಟ್ಟೆ ಪ್ರಾಂಗಣದಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿಗೆ ಗ್ರಾಮದೇವತೆ ದುರ್ಗಾದೇವಿ ದೇವಾಲಯ ಸಮಿತಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.
Published on


ಗಂಗಾವತಿ:
ನಗರದ ಗುಂಡಮ್ಮ ಕ್ಯಾಂಪ್‌ನಲ್ಲಿ ಆರಂಭಿಸಿರುವ ಸಿಟಿ ಮಾರುಕಟ್ಟೆ ಪ್ರಾಂಗಣಕ್ಕೆ ಗ್ರಾಮದೇವತೆ ಶ್ರೀ ದುರ್ಗಾದೇವಿ ಹೆಸರಿಡುವಂತೆ ಒತ್ತಾಯಿಸಿ ದೇವಾಲಯ ಸಮಿತಿ ಸದಸ್ಯರು ಶನಿವಾರ ಪೌರಾಯುಕ್ತ ಅರವಿಂದ ಜಮಖಂಡಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ನಗರದ ಅಸ್ತಿತ್ವಕ್ಕೆ ಮುನ್ನವೇ ಶ್ರೀದುರ್ಗಾದೇವಿ ದೇವಾಲಯವಿದ್ದು, ಎಲ್ಲ ಸಮುದಾಯಕ್ಕೂ ಆರಾಧ್ಯ ದೈವವಾಗಿದೆ. ನಗರದ ತರಕಾರಿ ಸೇರಿ ಬೀದಿ ಬದಿ ವ್ಯಾಪಾರಿಗಳೆಲ್ಲರನ್ನೂ ಅಧಿಕಾರಿಗಳು ಒಂದೇ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದಾರೆ. ಹೀಗಾಗಿ ಸಿಟಿ ಮಾರುಕಟ್ಟೆಗೆ ಗ್ರಾಮ ದೇವತೆ ಹೆಸರಿಟ್ಟು ಬಹುಜನರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್, ಸದಸ್ಯ ಅಜಯ ಬಿಚ್ಚಾಲಿ, ಮಾಜಿ ಸದಸ್ಯರಾದ ಜೋಗದ ಹನುಮಂತಪ್ಪ ನಾಯಕ, ಎಸ್.ರಾಘವೇಂದ್ರ ಶ್ರೇಷ್ಠಿ, ಬಿ.ಅಶೋಕ, ಮುಖಂಡರಾದ ಅಮರಜ್ಯೋತಿ ವೆಂಕಟೇಶ, ಕಾಶಿನಾಥ ಚಿತ್ರಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net