ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಲಿ, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಆಗ್ರಹ ಮುಷ್ಕರದ ಪೋಸ್ಟರ್ ಬಿಡುಗಡೆ

strike poster released
ಅಖಿಲ ಭಾರತ ಮುಷ್ಕರ ಭಾಗವಾಗಿ ಹಮ್ಮಿಕೊಂಡ ಪ್ರತಿಭಟನೆಯ ಪೋಸ್ಟರ್‌ಗಳನ್ನು ಗಂಗಾವತಿ ಬಸವೇಶ್ವರ ಮೂರ್ತಿ ಮುಂಭಾಗದಲ್ಲಿ ಬಿಡುಗಡೆಗೊಳಿಸಲಾಯಿತು. ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಎಂ.ಬಸವರಾಜ, ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ್ ಇತರರಿದ್ದರು.
Published on

ಗಂಗಾವತಿ: ಅಖಿಲ ಭಾರತ ಮುಷ್ಕರ ಭಾಗವಾಗಿ ಜು.9ರಂದು ಕಾರ್ಮಿಕರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಹೇಳಿದರು.

ನಗರದ ಬಸ್ ನಿಲ್ದಾಣದ ಬಳಿಯ ಬಸವೇಶ್ವರ ಮೂರ್ತಿ ಮುಂಭಾಗದಲ್ಲಿ ಮುಷ್ಕರದ ಪೋಸ್ಟರ್ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರುತ್ತಿದ್ದು, ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ ಮಾಡುತ್ತಿದೆ. ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ. ಕನಿಷ್ಟ ವೇತನ ಕಾಯ್ದೆ ಮರೀಚಿಕೆಯಾಗಿದ್ದು, ಕಾರ್ಮಿಕ ಸಂಹಿತೆ ರದ್ದು ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಜೀವನ ಭದ್ರತೆ, ಕನಿಷ್ಟ ವೇತನ, ಕಟ್ಟಡ ಕಾರ್ಮಿಕರಿಗೆ ಮೂಲ ಸೌಕರ್ಯ, ಹಮಾಲಿ ಕಾರ್ಮಿಕರಿಗೆ ಪಿಎ್, ಪಿಂಚಣಿ, ಖಾತರಿ ಯೋಜನೆಯಡಿ 200 ದಿನ ಮಾನವ ದಿನ ಮತ್ತು 600 ರೂ.ಕೂಲಿ ನಿಗದಿ, ಶಿಕ್ಷಣಕ್ಕೆ ಶೇ.30 ಅನುದಾನ ಮೀಸಲು, ದೇವದಾಸಿ, ಅಂಗವಿಕಲರ ಮಾಸಿಕ ಪಿಂಚಣಿ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು.

ಪ್ರತಿಭಟನೆಗೆ ಸಿಐಟಿಯು, ಕೆಪಿಆರ್‌ಎಸ್, ಎಐಎಡಬ್ಲು ್ಯಯು, ಎಸ್‌ಎ್ಐ, ದೇವದಾಸಿ ವಿಮೋಚನಾ ಸಂಘ, ಅಂಗವಿಕಲ ಪಾಲಕರ ಒಕ್ಕೂಟ, ಅಂಗನವಾಡಿ ಸೇರಿ ಇತರೆ ಸಂಘಟನೆಗಳು ಬೆಂಬಲಿಸಿವೆ ಎಂದರು.

ವಿವಿಧ ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ ಹೊಸಳ್ಳಿ, ಎ.ರಮೇಶ, ಕೃಷ್ಣಪ್ಪ, ರವಿ ಅಕ್ಕಿರೊಟ್ಟಿ, ಹುಲಿಗೆಮ್ಮ, ದುರುಗಮ್ಮ, ಮೇರಿ, ಯು.ನಾಗರಾಜ, ಮಹಿಮೂದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net