ಚಿತ್ರನಟಿ ಕಂಗನಾರನ್ನು ಗಡಿಪಾರು ಮಾಡುವಂತೆ ಸಿಪಿಐ(ಎಂಎಲ್)ಲಿಬರೇಶನ್ ಜಿಲ್ಲಾ ಸಮಿತಿ ಆಗ್ರಹ

Gangavati CPI Libration Request
ಚಿತ್ರನಟಿ ಕಂಗನಾ ರಣಾವತ್‌ರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಸಿಪಿಐ(ಎಂಎಲ್)ಲಿಬರೇಶನ್ ಜಿಲ್ಲಾ ಸಮಿತಿ ಗಂಗಾವತಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿತು.
Published on

ಗಂಗಾವತಿ: ಸ್ವಾತಂತ್ರೃ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ ಚಿತ್ರನಟಿ ಕಂಗನಾ ರಣಾವತ್‌ರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಸಿಪಿಐ(ಎಂಎಲ್)ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರು ನಗರದ ಮಿನಿವಿಧಾನಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಮಿತಿ ಕಾರ್ಯದರ್ಶಿ ಸಣ್ಣ ಹನುಮಂತಪ್ಪ ಹುಲಿಹೈದರ್ ಮಾತನಾಡಿ, 1947ರಲ್ಲಿ ಪಡೆದ ಸ್ವಾತಂತ್ರೃ ಕೇವಲ ಭಿಕ್ಷೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಓಲೈಕೆಗಾಗಿ ಸ್ವಾತಂತ್ರೃ ಹೋರಾಟವನ್ನು ಹೀಯಾಳಿಸುವ ಕಂಗನಾಗೆ ಪದ್ಮಶ್ರೀ ನೀಡಿ ಗೌರವಿಸಿದ್ದು ಸಂವಿಧಾನವನ್ನು ವಿರೋಧಿಸಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಆಯ್ಕೆಯಾದ ನಂತರವೇ ಸ್ವಾತಂತ್ರೃ ಸಿಕ್ಕಿದೆ ಎಂದು ಹೇಳಿಕೆ ನೀಡಿ ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರೃ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೂಡಲೇ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆದು ಆಕೆಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.ಪಕ್ಷದ ಸ್ಥಾಯಿ ಸಮಿತಿ ಸದಸ್ಯ ಜೆ.ಭಾರದ್ವಾಜ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಎಸ್.ಬಾಬರ್, ಅಬ್ದುಲ್, ಮೆಹಬೂಬ್, ಅಮೀರ್ ಅಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net