ಉತ್ತಮ ಮೌಲ್ಯಗಳೊಂದಿಗೆ ಬದುಕು ರೂಪಿಸಿಕೊಳ್ಳಿ

gangavathi childerns day
ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಗುರುವಾರ ಉದ್ಘಾಟಿಸಿದರು. ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಶೈಕ್ಷಣಿಕ ಮುಖ್ಯಸ್ಥೆ ಎಸ್.ಕಷ್ಣವೇಣಿ, ಪಿಆರ್‌ಎಂ ನಿಂಗಪ್ಪ, ಪ್ರಾಚಾರ್ಯೆ ಸುಭದ್ರಾ ದೇವಿ ಇದ್ದರು.
Published on

ಗಂಗಾವತಿ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಶ್ರೇಷ್ಠ ಸಾಧನೆ ಮಾಡುವಂತೆ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿದರು.

ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಡು, ನುಡಿ ಹಾಗೂ ರಾಷ್ಟ್ರಕ್ಕೆ ಗೌರವ ತರುವ ನಿಟ್ಟಿನಲ್ಲಿ ಜೀವನ ರೂಪಿಸಿಕೊಳ್ಳಬೇಕು. ಪಾಲಕರು, ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ಉತ್ತಮ ಪ್ರಜೆಗಳಾಗುವಂತೆ ಸಲಹೆ ನೀಡಿದರು. ಮಾಜಿ ಪ್ರಧಾನಿ ಪಂ.ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನೆಹರು ಜೀವನ ಕುರಿತು ಶಿಕ್ಷಕ ಎನ್.ನಿಖಿಲ್‌ದಾಸ್, ನಾಗರಾಜ್ ಉಪನ್ಯಾಸ ನೀಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಹಾಡು, ನತ್ಯ ರೂಪಕಗಳ ಪ್ರದರ್ಶನ ನಡೆಯಿತು. ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಶೈಕ್ಷಣಿಕ ಮುಖ್ಯಸ್ಥೆ ಎಸ್.ಕಷ್ಣವೇಣಿ, ಪಿಆರ್‌ಎಂ ನಿಂಗಪ್ಪ, ಪ್ರಾಚಾರ್ಯೆ ಸುಭದ್ರಾ ದೇವಿ ಇತರರಿದ್ದರು.

ವಿದ್ಯಾನಗರ

ಇಲ್ಲಿನ ಶ್ರೀ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಸುವರ್ಣ ಮಹೋತ್ಸವ ವಿದ್ಯಾರ್ಥಿ ಭವನ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಮುಖ್ಯಶಿಕ್ಷಕಿ ಪಿ.ವಿ.ಎಲ್.ಕುಮಾರಿ, ಭವನ ಉದ್ಘಾಟಿಸಿ ಮಾತನಾಡಿದರು. ಹಿರಿಯ ವೈದ್ಯ ಪಿ.ವಿ.ವಿ. ರಾಜು ಅವರನ್ನು ಸಂಸ್ಥೆಯಿಂದ ಸನ್ಮಅನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾಡಳಿತ ಮಂಡಳಿ ಅಧ್ಯಕ್ಷ ಎಸ್. ಪ್ರಸಾದ್, ಕಾರ್ಯದರ್ಶಿ ರಾಜಶೇಖರ್, ಖಜಾಂಚಿ ಎಂ.ಸತ್ಯನಾರಾಯಣ, ಉದ್ಯಮಿಗಳಾದ ಎನ್.ಆರ್. ಶ್ರೀನಿವಾಸ್, ಟಿ.ವಿ. ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net