ರುದ್ರಭೂಮಿ ತ್ಯಾಜ್ಯ ಸಂಗ್ರಹ ನಿಯಂತ್ರಿಸಿ

waste collection,
ರುದ್ರಭೂಮಿಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಗಂಗಾವತಿ ತಾಲೂಕಿನ ಸಂಗಾಪುರದ ಬಂಜಾರ ಸಮಾಜದವರು ರುದ್ರಭೂಮಿ ಬಳಿಯ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸಮಾಜದ ಮುಖಂಡರಾದ ಹುಸೇನ್ ನಾಯ್ಕ, ಎಲ್.ಗೋವಿಂದನಾಯ್ಕ, ಕೃಷ್ಣನಾಯ್ಕ, ದೊಡ್ಡಪ್ಪ ತಿಪ್ಪಣ್ಣನಾಯ್ಕ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಸಂಗಾಪುರದಲ್ಲಿ ಬಂಜಾರ ಸಮಾಜಕ್ಕೆ ಮೀಸಲಿರುವ ರುದ್ರಭೂಮಿಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ನಿಯಂತ್ರಿಸುವಂತೆ ಒತ್ತಾಯಿಸಿ ಸಂಗಾಪುರ ಬಂಜಾರ ಸಮಾಜದವರು ರುದ್ರಭೂಮಿ ಬಳಿಯ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಮಾಜದ ಮುಖಂಡ ಹುಸೇನ್ ನಾಯ್ಕ ಮಾತನಾಡಿ, ಸಂಗಾಪುರದಲ್ಲಿರುವ ಬಂಜಾರ ಸಮಾಜದ ರುದ್ರಭೂಮಿಯಲ್ಲಿ ರೆಸಾರ್ಟ್‌ಗಳು ಮತ್ತು ಖಾಸಗಿ ಶಾಲೆಯವರು ತ್ಯಾಜ್ಯ ಹಾಕುತ್ತಿದ್ದು, ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಅಂತ್ಯಕ್ರಿಯೆಗೆ ಹೋಗುವಾಗ ಮೂಗು ಮುಚ್ಚಿಕೊಂಡೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಂಬಂಧಪಟ್ಟ ರೆಸಾರ್ಟ್ ಮತ್ತು ಖಾಸಗಿ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮುಖಂಡರಾದ ಎಲ್.ಗೋವಿಂದನಾಯ್ಕ, ಕೃಷ್ಣನಾಯ್ಕ, ದೊಡ್ಡಪ್ಪ ತಿಪ್ಪಣ್ಣನಾಯ್ಕ, ಬಿಲ್ಲಾ ನಾಯ್ಕ, ಅರ್ಜುನ ನಾಯ್ಕ, ರವಿನಾಯ್ಕ, ಅನಿಲ್ ನಾಯ್ಕ, ಪರಶುರಾಮ್ ನಾಯ್ಕ, ಸಂಜುನಾಯ್ಕ, ಪೀರುನಾಯ್ಕ, ಹನುಮಂತ ನಾಯ್ಕ, ಕೀರ್ ನಾಯ್ಕ, ಶ್ರೀನಿವಾಸ ನಾಯ್ಕ, ರಾಮಾನಾಯ್ಕ, ಲಕ್ಷ್ಮಣ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net