ಗಂಗಾವತಿ ಬೈಪಾಸ್ ರಸ್ತೆ ಕಾಮಗಾರಿ ಮರು ಆರಂಭ: ಬಳ್ಳಾರಿ ಡಿಯುಡಿಸಿ ಇಂಜಿನಿಯರ್‌ಗಳ ಪರಿಶೀಲನೆ

Kampli Gangavati Bypass Road Work
ಕಂಪ್ಲಿ ಹೊಸ ಬಸ್ ನಿಲ್ದಾಣ ಬಳಿಯ ರಸ್ತೆ ಬದಿಯ ಚರಂಡಿ ಕಾಮಗಾರಿಯನ್ನು ಡಿಯುಡಿಸಿ ಇಇ ಹೇಮರಾಜ್ ಪರಿಶೀಲಿಸಿದರು.
Published on

ಕಂಪ್ಲಿ: ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಿಂದ ತುಂಗಭದ್ರಾ ನದಿ ಸೇತುವೆ ತನಕದ (ಗಂಗಾವತಿ ಬೈಪಾಸ್)ರಸ್ತೆ ಕಾಮಗಾರಿಯನ್ನು ಬಳ್ಳಾರಿ ಡಿಯುಡಿಸಿ ಇಂಜಿನಿಯರ್‌ಗಳು ಗುರುವಾರ ಪರಿಶೀಲಿಸಿದರು.

ಹೊಸ ಬಸ್ ನಿಲ್ದಾಣ ಬಳಿಯ ರಸ್ತೆ ಬದಿಯ ಭೂಮಾಲೀಕರಾದ ಎಸ್.ಅನಿಲ್‌ಕುಮಾರ್, ಲಬೇದ ಸೋಮನಾಥ್, ಕಟ್ಟೆ ಶಂಕರ್, ರಸ್ತೆ ಬದಿಗೆ ನಿರ್ಮಿಸುತ್ತಿರುವ ಚರಂಡಿ ಮೇಲೆ ಎರಡು ಅಡಿಗಳಷ್ಟು ರಕ್ಷಣಾ ಗೋಡೆ ನಿರ್ಮಿಸುತ್ತಿದ್ದು, ಚರಂಡಿ ಆಚೆಯ ಅಂಗಡಿ, ಮಳಿಗೆಗಳಿಗೆ ಜನ ಹೋಗಿ ಬರಲು ತೊಂದರೆಯಾಗುತ್ತಿದ್ದು, ಕೈಬಿಡಬೇಕು. ಇಲ್ಲವೆ ರಕ್ಷಣಾ ಗೋಡೆ ಎತ್ತರ ಕಡಿಮೆ ಇರಬೇಕು ಎಂದು ಮನವಿ ಮಾಡಿದರು.

ಡಿಯುಡಿಸಿ ಇಇ ಹೇಮರಾಜ್ ಮಾತನಾಡಿ, ಚರಂಡಿಗೆ ಧಕ್ಕೆಯಾಗದಂತೆ ತಾಂತ್ರಿಕವಾಗಿ ರಕ್ಷಣಾ ಗೋಡೆ ನಿರ್ಮಿಸಲಾಗುವುದು. ಮತ್ತೊಮ್ಮೆ ಪರಿಶೀಲಿಸಿ ಯಾರಿಗೂ ಅನನುಕೂಲವಾಗದಂರಡ ರಕ್ಷಣಾ ಗೋಡೆ ನಿರ್ಮಿಸಲಾಗುವುದು. ರಸ್ತೆ ಅಭಿವೃದ್ಧಿ ಕಾಮಗಾರಿ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದು ಇದೀಗ ಮತ್ತೆ ಆರಂಭವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಯ ಭೂಮಾಲೀಕರು ಸಹಕರಿಸುವಂತೆ ಕೋರಿದರು. ಡಿಯುಡಿಸಿ ಎಇಇ ಎಂ.ನಾಗನಾಥ್, ಪುರಸಭೆ ಜೆಇ ಗೋಪಾಲ್, ಪ್ರಮುಖರಾದ ವಿ.ವಿದ್ಯಾಧರ, ವಿ.ಎಲ್.ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net