

ಗಂಗಾವತಿ, ಬಾಲಕರು ನೀರು ಪಾಲು, Gangavathi, boys share water,
ಗಂಗಾವತಿ: ಚಿಕ್ಕಜಂತಕಲ್ ಬಳಿ ತುಂಗಭದ್ರಾ ನದಿಗೆ ಕುಟುಂಬದ ಜತೆಗೆ ಸೋಮವಾರ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದು, ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಮತ್ತೊಬ್ಬನಿಗಾಗಿ ಶೋಧ ನಡೆದಿದೆ. ಗಂಗಾವತಿಯ ಪವನ್ ಶರಣಪ್ಪ ಕಟ್ಟಿಮನಿ (14) ಮೃತ ಬಾಲಕ.
ಬಹಾದ್ದೂರಬಂಡಿಯ ಗೌತಮ್ ನಾಗರಾಜ್ ವದ್ನಾಳ್ ಪತ್ತೆಗಾಗಿ ಶೋಧ ನಡೆದಿದೆ. ಇತ್ತೀಚೆಗೆ ಮನೆಯಲ್ಲಿ ಮದುವೆ ಕಾರ್ಯ ನಡೆದಿದ್ದು, ಹಂದರದ ವಸ್ತುಗಳನ್ನು ನೀರಿಗೆ ಬಿಡಲು ನದಿಗೆ ಬಂದಾಗ ದುರ್ಘಟನೆ ನಡೆದಿದೆ.
ನೀರುಪಾಲಾದ ಬಾಲಕನ ಪತ್ತೆಗಾಗಿ ಅಗ್ನಿಶಾಮಕ, ಪೊಲೀಸರು ಮತ್ತು ನುರಿತ ಹರಿಗೋಲು ಹಾಕುವರ ತಂಡ ಕಾರ್ಯಾಚರಣೆ ನಡೆಸಿದೆ.