ಸಾಹಿತ್ಯ ಬೆಳೆವಣಿಗೆಗೆ ಸಹಕಾರ ಅಗತ್ಯ, ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿಕೆ

book release program
ಗಂಗಾವತಿ ಐಎಂಎ ಹಾಲ್‌ನಲ್ಲಿ ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ ರಚಿಸಿರುವ ಉಲಿದಷ್ಟೆ ದನಿ ಮತ್ತು ಮಿಣುಕು ದೀಪಗಳು ಕೃತಿಗಳನ್ನು ಗಣ್ಯರು ಭಾನುವಾರ ಬಿಡುಗಡೆಗೊಳಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವಲಿಂಗಪ್ಪ ಹಂದ್ಯಾಳ್ ಇತರರಿದ್ದರು.
Published on

ಗಂಗಾವತಿ: ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದಂತೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಅತಿ ಹೆಚ್ಚು ಸಾಹಿತ್ಯ ಕಾರ್ಯಕ್ರಮಗಳಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಕಸಾಪ ತಾಲೂಕು ಘಟಕ ಮತ್ತು ಭರತ ದೀಪ್ತಿ ಪ್ರಕಾಶನದಿಂದ ಭಾನುವಾರ ಹಮ್ಮಿಕೊಂಡಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಾದರೂ ರಾಜ್ಯಮಟ್ಟದಲ್ಲಿ ಗಮನಸೆಳೆಯುತ್ತಿದ್ದು, ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಗಂಗಾವತಿ ಜನರಿಗೆ ಸಲ್ಲಲಿದೆ ಎಂದರು.

ಹಾಸ್ಯಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಮಾತನಾಡಿ, ಸಮಯ ಪ್ರಜ್ಞೆ ಮುಖ್ಯವಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಆರಂಭಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ ಎಂದರು.

ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ ರಚಿಸಿರುವ ಉಲಿದಷ್ಟೆ ದನಿ ಮತ್ತು ಮಿಣುಕು ದೀಪಗಳು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕೃತಿ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವಲಿಂಗಪ್ಪ ಹಂದ್ಯಾಳ್ ಮಾತನಾಡಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಡಾ.ಜಾಜಿ ದೇವೇಂದ್ರಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ, ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ ಡಾ.ಮುಮ್ತಾಜ್ ಬೇಗಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ಸಿಬಿಎಸ್ ಕಲ್ಯಾಣ ಮಂಟಪ ಟ್ರಸ್ಟಿ ಕೆ.ಚನ್ನಬಸಯ್ಯಸ್ವಾಮಿ, ವೈದ್ಯರಾದ ಶಿವಕುಮಾರ ಮಾ.ಪಾಟೀಲ್, ಮಲ್ಲನಗೌಡ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ದಲಿತ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ, ಚುಸಾಪ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ, ಸ.ಪ್ರೌ.ಶಾಲೆ ಮುಖ್ಯಶಿಕ್ಷಕ ವಿ.ಬಿ.ಗೊಂಡಬಾಳ್, ಶಿಕ್ಷಕ ಶರಣಪ್ಪ ಹಕ್ಕಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net