

ಗಂಗಾವತಿ: ಪಕ್ಷ ಸಂಘಟನೆಯೊಂದಿಗೆ ಪರಿಸರ ಸ್ವಚ್ಛತೆಯತ್ತ ಬಿಜೆಪಿ ಕಾರ್ಯಕರ್ತರು ಗಮನಹರಿಸಬೇಕಿದ್ದು, ಸ್ವಚ್ಛ ಭಾರತ ಸಂಕಲ್ಪಕ್ಕೆ ನೆರವಾಗುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಎಚ್.ಎಂ.ತಿಪ್ಪೇರುದ್ರಸ್ವಾಮಿ ಸಲಹೆ ನೀಡಿದರು.
ನಗರದ ಆನೆಗೊಂದಿ ರಸ್ತೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಸೇವಾ ಸಪ್ತಾಹ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿಯ 150ನೇ ಜನ್ಮದಿನಾಚರಣೆ ನಿಮಿತ್ತ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಪರಿಸರ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕಾಶೀನಾಥ ಚಿತ್ರಗಾರ ಮಾತನಾಡಿದರು. ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಯಕ ಹೊಸಮಲಿ, ನಗರ ಘಟಕದ ಅಧ್ಯಕ್ಷ ಬಸವರಾಜ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಚವಾಣ್, ಅಲ್ಪಸಂಖ್ಯಾತ ಮೋರ್ಚಾ ನಗರ ಅಧ್ಯಕ್ಷ ಸೈಯ್ಯದ್ ಮಹೆಮೂದ್, ಮುಖಂಡರಾದ ಯಂಕಪ್ಪ ಕಟ್ಟಿಮನಿ, ದೇವರಾಜ್ ಸಂಗಾಪುರ, ಹನುಮಂತಪ್ಪ ಗಾಲಿ, ಭೀಮೇಶ ಉಪ್ಪಾರ, ಸಂಗಯ್ಯಸ್ವಾಮಿ ಸಂಶಿಮಠ ಶ್ರೀನಿವಾಸ ಧೂಳಾ ಇತರರಿದ್ದರು.
ಪ್ರಧಾನ ಕಾರ್ಯದರ್ಶಿ ವೆಂಕಟೇಶ ಚವಾಣ್, ಅಲ್ಪಸಂಖ್ಯಾತ ಮೋರ್ಚಾ ನಗರ ಅಧ್ಯಕ್ಷ ಸೈಯ್ಯದ್ ಮಹೆಮೂದ್, ಮುಖಂಡರಾದ ಯಂಕಪ್ಪ ಕಟ್ಟಿಮನಿ, ದೇವರಾಜ್ ಸಂಗಾಪುರ, ಹನುಮಂತಪ್ಪ ಗಾಲಿ, ಭೀಮೇಶ ಉಪ್ಪಾರ, ಸಂಗಯ್ಯಸ್ವಾಮಿ ಸಂಶಿಮಠ ಶ್ರೀನಿವಾಸ ಧೂಳಾ ಇತರರಿದ್ದರು.