ಜೀವನದ ಅನುಭವವೇ ಬದುಕಿನ ಯಶಸ್ಸು

23 gvt 01
Published on

ಗಂಗಾವತಿ: ಸಮಾಜದಲ್ಲಿ ಕೌಶಲ, ಜ್ಞಾನ ಮತ್ತು ಪ್ರತಿಭೆಗೆ ಎಲ್ಲ ಸಂದರ್ಭದಲ್ಲೂ ಮನ್ನಣ್ಣೆ ದೊರೆಯಲಿದೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.

ನಗರದ ಕೊಪ್ಪಳ ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜ್ಞಾನ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಕ್ರಿಯಾಶೀಲರಾಗಬೇಕಿದ್ದು, ಓದು ಸೃಜನಶೀಲತೆಗೆ ರಹದಾರಿ. ಸಾಹಿತ್ಯದ ಅಧ್ಯಯನ ವ್ಯಕ್ತಿತ್ವ ರೂಪಿಸುತ್ತಿದ್ದು, ಪರೀಕ್ಷೆ ಲಿತಾಂಶ ಓದಿಗೆ ಕಾರಣವಾದರೆ, ಜೀವನಾನುಭವ ಬದುಕಿನ ಯಶಸ್ಸು ರೂಪಿಸಲಿದೆ. ಉನ್ನತ ಶಿಕ್ಷಣದ ಮೂಲಕ ಸಾಧನೆ ಮಾಡುವಂತೆ ಸಲಹೆ ನೀಡಿದರು.

ಶ್ರೀರಾಮನಗರ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಜ್ಞಾನಕ್ಕೆ ಮಹತ್ವವಿದ್ದು, ಅದು ನಮ್ಮನ್ನು ಬಹು ಎತ್ತರಕ್ಕೆ ಏರಿಸುತ್ತದೆ. ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದ್ದು, ವಿಭಿನ್ನ ಸಾಧನೆಗೆ ದಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಕೇಂದ್ರದ ನಿರ್ದೇಶಕಿ ಡಾ.ಮುಮ್ತಾಜ್ ಬೇಗಂ ಮಾತನಾಡಿದರು. ಉಪನ್ಯಾಸಕರಾದ ಡಾ.ಮಾನಸ, ಪರಶುರಾಂ, ಅಮೃತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net