ಕೀಡಾ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲಿ ಮಾನ್ಯ

UNTILETED 1
Published on

ಗಂಗಾವತಿ: ತಾಲೂಕಿನ ಬಸವನದುರ್ಗದ ಮೈದಾನದಲ್ಲಿ ಯುವಕರ ಕ್ರೀಡಾ ಬಳಗದಿಂದ ಬಸವನದುರ್ಗ ಪ್ರಿಮಿಯರ್ ಲೀಗ್ (ಬಿಪಿಎಲ್) ಕ್ರಿಕೆಟ್ ಪಂದ್ಯಾವಳಿಗೆ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಚಾಲನೆ ನೀಡಿದರು.

ಯುವಕರು ಕ್ರೀಡಾ ಚಟುವಟಿಕೆಗಳ ಮೂಲಕ ಸದೃಢರಾಗಬೇಕಿದೆ. ಕ್ರೀಡಾ ಸ್ಪೂರ್ತಿಯಿಂದ ಪಂದ್ಯಾವಳಿ ಆಯೋಜಿಸಬೇಕು. ಕೀಡಾ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲಿ ಮಾನ್ಯತೆ ಇದೆ.ಶಿಕ್ಷಣ ಮತ್ತು ಉದ್ಯೋಗದಲ್ಲೂ ಮೀಸಲಿದೆ ಎಂದು ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಹೇಳಿದರು.

ಗ್ರಾಪಂ ಸದಸ್ಯರಾದ ಡಾ.ಕೆ.ವೆಂಕಟೇಶ ಬಾಬು, ರಾಜಶೇಖರ್, ಪಿಡಿಒ ರವೀಂದ್ರ ಕುಲ್ಕರ್ಣಿ, ಕ್ರೀಡಾ ಅಯೋಜಕರಾದ ರಾಮಕೃಷ್ಣ ನಾಯುಕ, ಲೋಕೇಶ, ಮುಖಂಡ ಹೊನ್ನಪ್ಪ ನಾಯಕ ಇತರರಿದ್ದರು. ಆನೆಗೊಂದಿ ಗ್ರಾಪಂ ವ್ಯಾಪ್ತಿಯ 5 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net