ಬಸಾಪಟ್ಟಣ ಶರಣಬಸವೇಶ್ವರ ತೇರು ಜೋರು

Chariot Festival
ಬಸಾಪಟ್ಟಣದ ಶ್ರೀ ಶರಣಬಸವೇಶ್ವರ ರಥೋತ್ಸವ ಬುಧವಾರ ಸಂಜೆ ಅದ್ದೂರಿಯಾಗಿ ಜರುಗಿತು.
Published on

ಗಂಗಾವತಿ: ತಾಲೂಕಿನ ಬಸಾಪಟ್ಟಣದ ಶ್ರೀ ಶರಣಬಸವೇಶ್ವರ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗೆ ರುದ್ರಾಭಿಷೇಕ ಸಲ್ಲಿಸಿ ಕುಂಭ, ಕಳಸದೊಂದಿಗೆ ಗಂಗೆಸ್ಥಳಕ್ಕೆ ತೆರಳಲಾಯಿತು. ಪುರಾಣ ಮಂಗಲ, ಭಜನೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ಸರ್ವಾಲಂಕೃತ ರಥೋತ್ಸವ ರಥಬೀದಿಯಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗ್ರಾಪಂ ಅಧ್ಯಕ್ಷ ಆಂಜನೇಯ ನಾಯಕ, ಪುರಾಣ ಪ್ರವಚನಕಾರ ಶಿವನಂದೀಶ್ವರ ಶಾಸಿ, ಕಲಾವಿದರಾದ ಹನುಮಂತರಾಯ ಗವಾಯಿ, ಮಹ್ಮದ್ ರಿಜ್ವಾನ್ ಮುದ್ದಾಬಳ್ಳಿ, ಮುಖಂಡರಾದ ಬಸನಗೌಡ, ವಿರೂಪಾಕ್ಷಗೌಡ, ಮಲ್ಲಪ್ಪ ಕಳಮಳ್ಳಿ, ಭೀಮಣ್ಣ ಭೈರನಾಯಕನಹಳ್ಳಿ, ತಿಮ್ಮಣ್ಣ, ಶಿವಮೂರ್ತ್ಯೆಯ್ಯ ಸ್ವಾಮಿ, ಮಲ್ಲಯ್ಯಸ್ವಾಮಿ ಇತರರಿದ್ದರು.

ಉಡುಮಕಲ್: ತಾಲೂಕಿನ ಉಡುಮಕಲ್‌ನಲ್ಲೂ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಶೇಷ ಪೂಜೆ ನಂತರ ಗದಗಿನ ವೀರೇಶ್ವರ ಪುಣ್ಯಾಶ್ರಾಮದ ಪೀಠಾಧಿಪತಿ ಕಲ್ಲಯ್ಯಜ್ಜನವರ ತುಲಾಭಾರ, ಧಾರ್ಮಿಕ ಸಭೆ ಮತ್ತು ಸಾಮೂಹಿಕ ವಿವಾಹ ನಡೆದವು.

ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣಹಾಕಲಿವೆ ಎಂದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಗ್ರಾಪಂ ಅಧ್ಯಕ್ಷ ಪರಸಪ್ಪ, ಮುಖಂಡರಾದ ಸಿದ್ದಪ್ಪ ನೀರಲೂಟಿ, ಶಿವಮೂರ್ತಿಗೌಡ, ಭುವನೇಶಪ್ಪ , ಮಂಜುನಾಥ ಕೋರಿ, ಶರಣಯ್ಯಸ್ವಾಮಿ, ಸಿದ್ದಲಿಂಗಯ್ಯಸ್ವಾಮಿ ಗಡ್ಡಿಮಠ, ಪ್ರಕಾಶ ಕೋರಿಶೆಟ್ಟರ್, ಭೀಮಣ್ಣ, ಅಕ್ಕಿಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net