

ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಪಂ ವ್ಯಾಪ್ತಿಯ ಸೂರ್ಯನಾಯಕನ ತಾಂಡಾವನ್ನು ಕಂದಾಯ ಗ್ರಾಮವೆಂದು ೋಷಿಸುವುದಕ್ಕಾಗಿ ತಾಲೂಕಾಡಳಿತದ ಅಧಿಕಾರಿಗಳ ತಂಡ ಶುಕ್ರವಾರ ತಾಂಡಾಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
ಕಂದಾಯ ಗ್ರಾಮೋಷಣೆಗಾಗಿ ತಾಂಡಾ ನಿವಾಸಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದನ್ನು ಗಂಭೀರ ಪರಿಗಣಿಸಿದ ಕಂದಾಯ ಆಯುಕ್ತಾಲಯದ ಅಧಿಕಾರಿಗಳು, ಮಾಹಿತಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದರು. ಕಂದಾಯ ಗ್ರಾಮ ೋಷಣೆ ಕೋಶದ ಅಧಿಕಾರಿ ಶ್ವೇತಾ ಮತ್ತು ತಹಸೀಲ್ದಾರ್ ಯು.ನಾಗರಾಜ್ ನೇತೃತ್ವದ ವಿವಿಧ ಇಲಾಖೆ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಪಡೆದುಕೊಂಡಿತು. ಇಲಾಖೆ ಸೂಚನೆಯಂತೆ ಮಾಹಿತಿ ಪಡೆದುಕೊಂಡಿದ್ದು, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ್ ತಿಳಿಸಿದರು.
ಗ್ರಾಪಂ ಸದಸ್ಯೆ ಗೌರಮ್ಮ ಶಂಕರನಾಯಕ, ಮುಖಂಡರಾದ ಬಾಲಾಜಿ ಚವ್ಹಾಣ, ಹನುಮಂತಪ್ಪ ನಾಯಕ, ಎಸ್.ವಿ.ಗೋಪಾಲಕೃಷ್ಣ, ಎಸ್ಡಿಎಂಸಿ ಅಧ್ಯಕ್ಷ ಅಮರೇಶ ನಾಯಕ, ಕಟ್ಟಿಮನಿ ಹನುಮಂತಪ್ಪ, ಕಾರಭಾರಿ ಸಕ್ರಪ್ಪ, ಶಂಕ್ರಪ್ಪ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.