ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿ

gvt 03
ಗಂಗಾವತಿ ತಾಲೂಕಿನ ಬಸಾಪಟ್ಟಣದ 5ನೇ ವಾರ್ಡ್ ಶ್ರೀಕೋದಂಡರಾಮ ಕಾಲನಿಯ ಸಂಪರ್ಕ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕಾಲನಿ ನಿವಾಸಿಗಳು ರಸ್ತೆಯಲ್ಲಿ ಭಾನುವಾರ ಪ್ರತಿಭಟಿಸಿದರು. ನಿವಾಸಿಗಳಾದ ಪ್ರಸಾದ, ರವಿ ಬಸಾಪಟ್ಟಣ, ಶ್ರೀಕಾಂತ, ರಾಮಶೇಷಯ್ಯ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಬಸಾಪಟ್ಟಣದ 5ನೇ ವಾರ್ಡ್ ಶ್ರೀಕೋದಂಡರಾಮ ಕಾಲನಿಯ ಸಂಪರ್ಕ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕಾಲನಿ ನಿವಾಸಿಗಳು ರಸ್ತೆಯಲ್ಲಿ ಭಾನುವಾರ ಪ್ರತಿಭಟಿಸಿದರು.

ಕಾಲನಿ ಸಂಪರ್ಕಕ್ಕಾಗಿ ಮುಖ್ಯರಸ್ತೆಯಿಂದ ಮೊದಲಿನಿಂದಲೂ ರಸ್ತೆಯಿದ್ದು, ಜಮೀನು ಮಾಲೀಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಕಾಲನಿ ನಿವಾಸಿಗಳು ಸ್ವಂತ ಖರ್ಚಿನಲ್ಲೇ ರಸ್ತೆ ನಿರ್ಮಿಸಿಕೊಂಡಿದ್ದರು.

ಆದರೆ, ಕೆಲವರು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ರಾತ್ರೋರಾತ್ರಿ ರಸ್ತೆಯನ್ನು ಹಾಳು ಮಾಡಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಕಂದಾಯ, ಗ್ರಾಪಂ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದರು.

ಪ್ರಮುಖರಾದ ಪ್ರಸಾದ, ರವಿ ಬಸಾಪಟ್ಟಣ, ಶ್ರೀಕಾಂತ, ರಾಮಶೇಷಯ್ಯ, ಮೇಕಾ ರಾಮಕಷ್ಣ, ಜಿ.ರಾಮಕಷ್ಣ, ರಾಜೇಂದ್ರ, ಚಂದ್ರಶೇಖರ್‌ರಾವ್, ನಾಗೇಶ್ವರರಾವ್, ವೆಂಕಣ್ಣ,ರಾಮಕಷ್ಣ ಇತರರಿದ್ದರು. ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು, ಕಾಲನಿ ನಿವಾಸಿಗಳು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net