ಆರ್ಯ ವೈಶ್ಯ ಸಮಾಜ, ವಾಸವಿ ಮಹಿಳಾ ಮಂಡಳಿಯಿಂದ ಶ್ರೀವಾಸವಿ ಜಯಂತ್ಯುತ್ಸವ

11052022 Gangavati vasavi jayanti
Published on

ಗಂಗಾವತಿ: ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಕುಲದೇವತೆ ಶ್ರೀವಾಸವಿ ಜಯಂತ್ಯುತ್ಸವ ಬುಧವಾರ ಆಚರಿಸಲಾಯಿತು.

ಕುಂಭ, ಕಳಸದೊಂದಿಗೆ ಕೋಟೆ ಆಂಜನೇಯ ದೇವಾಲಯದಿಂದ ನಗರೇಶ್ವರ ದೇವಾಲಯದವರೆಗೂ ಭಾವಚಿತ್ರ ಮೆರವಣಿಗೆ ಜರುಗಿತು. ಉತ್ಸವ ಮೂರ್ತಿಯನ್ನು ವಿಶೇಷ ಅಲಂಕರಿಸಿದ್ದರು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಪ್ರಸಾದ ವಿತರಣೆ ನಡೆಯಿತು. ದೇವಾಲಯದ ಅರ್ಚಕ ದಿಗಂಬರ್‌ಭಟ್ ವೈದ್ಯ ಪೌರೋಹಿತ್ಯ ವಹಿಸಿದ್ದರು. ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ದರೋಜಿ ಶ್ರೀರಂಗ ಶ್ರೇಷ್ಠಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮುದಾಯದವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಮುದಾಯದ ಮುಖಂಡರಾದ ಸಂತೋಷ ಕೆಲೋಜಿ, ಆಶೋಕ ಪಾನಗಂಟಿ, ನಾಗೇಶ ಜನಾದ್ರಿ, ರಾಮಚಂದ್ರಶ್ರೇಷ್ಠಿ, ಕಾಶೀನಾಥ ಶಿರಿಗೇರಿ, ಗುರುರಾಜ್ ತುಳಸಪ್ಪ, ರಟ್ಟಿಹಳ್ಳಿ ಗಿರೀಶ್, ಎ.ಶ್ರೀನಿವಾಸ ಶ್ರೇಷ್ಠಿ, ಮಹಿಳಾ ಸಂಘದ ಅಧ್ಯಕ್ಷೆ ರಮಾ ದರೋಜಿ, ಪದಾಧಿಕಾರಿಗಳಾದ ಲತಾ ಜನಾರ್ದನ, ಅಪರಾಜಿತಾ ಇತರರಿದ್ದರು.

ಬಸಾಪಟ್ಟಣ: ಶ್ರೀ ನಂಜುಡೇಶ್ವರ ಮಠದಲ್ಲಿ ಆರ್ಯ ವೈಶ್ಯ ವಾಸವಿ ಯುವ ಸಂಘದಿಂದ ಶ್ರೀ ವಾಸವಿ ಜಯಂತ್ಯುತ್ಸವ ಆಚರಿಸಲಾಯಿತು. ಶ್ರೀ ಶರಣಬಸವೇಶ್ವರ ದೇವಾಲಯದಿಂದ ನಂಜುಂಡೇಶ್ವರ ದೇವಾಲಯದವರೆಗೆ ಕುಂಭ ಮತ್ತು ಭಾವಚಿತ್ರದ ಮೆರವಣಿಗೆ ಜರುಗಿತು. ಸಂಘದ ಗೌರವಾಧ್ಯಕ್ಷ ಛಾಯಣ್ಣ ಶ್ರೇಷ್ಠಿ ಮಾತನಾಡಿದರು. ಅಧ್ಯಕ್ಷ ಬಿ.ಪಾಂಡುರಂಗ ಶ್ರೇಷ್ಠಿ, ಉಪಾಧ್ಯಕ್ಷ ಗವಿಸಿದ್ದೇಶ್ವರ ಶ್ರೇಷ್ಠಿ ಪದಾಧಿಕಾರಿಗಳಾದ ಯಲ್ಲಯ್ಯ ಶ್ರೇಷ್ಠಿ, ಶ್ರೀನಿವಾಸ ಇಂದರಗಿ, ಚಂದ್ರಕಾಂತ ಶ್ರೇಷ್ಠಿ, ಪ್ರಾಣೇಶ ಶ್ರೇಷ್ಠಿ, ಸಂತೋಷಕುಮಾರ ಹೇಮಗುಡ್ಡ, ಸತ್ಯನಾರಾಯಣ ಶ್ರೇಷ್ಠಿ ಸುರೇಬಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net