ವೇತನ ಪಾವತಿಸಲು ಒತ್ತಡ ಹಾಕಿ

Gangavathi Narega workers meet mla reddy
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಸೋಮವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ, ಪದಾಧಿಕಾರಿಗಳಾದ ಶರಣಯ್ಯ, ಬಾಳಪ್ಪ ತಾಳಕೇರಿ, ಶರಣಬಸವ ಮಾಲಿಪಾಟೀಲ್, ಬಸವರಾಜ ಜಟಗಿ ಇತರರಿದ್ದರು.
Published on

ಗಂಗಾವತಿ: ಬಾಕಿ ವೇತನ ಮತ್ತು ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಸೋಮವಾರ ಮನವಿ ಸಲ್ಲಿಸಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ರೆಡ್ಡಿಯನ್ನು ಭೇಟಿಯಾದ ಸಂಘದ ಸದಸ್ಯರು, ಸಮಸ್ಯೆಗಳ ಬಗ್ಗೆ ಚರ್ಚಿಸಿದರಲ್ಲದೆ, ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ ಮಾತನಾಡಿ, ನರೇಗಾ ಯೋಜನೆಯಡಿ ಹಲವು ವರ್ಷಗಳಿಂದ ದುಡಿಯುತ್ತಿದ್ದು, ರಾಜ್ಯದ 5000ಕ್ಕೂ ಹೆಚ್ಚು ನೌಕರರಿಗೆ ಕಳೆದ ಆರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ, ಪ್ರಯಾಣ ವೆಚ್ಚಗಳು, ಸಾಲಗಳ ಮರುಪಾವತಿ ಸೇರಿ ಖರ್ಚು-ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ ಎಂದರು.

ಶಾಸಕ ರೆಡ್ಡಿ ಪ್ರತಿಕ್ರಿಯಿಸಿ, ಈ ಕುರಿತು ಸದನದಲ್ಲಿ ಚರ್ಚಿಸಲಾಗುವುದು ಎಂದರು. ಪದಾಧಿಕಾರಿಗಳಾದ ಶರಣಯ್ಯ, ಬಾಳಪ್ಪ ತಾಳಕೇರಿ, ಶರಣಬಸವ ಮಾಲಿಪಾಟೀಲ್, ಬಸವರಾಜ ಜಟಗಿ, ಉದಯಕುಮಾರ್, ಸಂಗಮೇಶ, ಶ್ರೀಕಾಂತ ಅರ್ಲೂರು, ವಿಜಯ ಶಿರಿಗೇರಿ, ಹನುಮೇಶ, ಶ್ವೇತಾ, ನಿಂಗಪ್ಪ, ಯಂಕೋಬ, ಮಾರುತಿ, ಹನುಮೇಶ, ಸುರೇಶ, ವಿರುಪಣ್ಣ, ಮಲ್ಲಮ್ಮ, ಸುಜಾತಾ, ಲಲಿತಾ, ಹುಲಿಗೆಮ್ಮ, ಯಶೋದಾ, ಶಾರದಾ, ನಾಗಮ್ಮ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net