ಅಂಜನಾದ್ರಿ ಆಗಲಿದೆ ತಿರುಪತಿಯಷ್ಟೇ ಪ್ರಸಿದ್ಧಿ: ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ ಅಭಿಮತ

280622 Vinay Guruji Visit Anjanadri Hill
ಅಂಜನಾದ್ರಿ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ್ದ ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿಯನ್ನು ಬಿಜೆಪಿ ಮುಖಂಡರು ಸನ್ಮಾನಿಸಿದರು.
Published on

ಗಂಗಾವತಿ: ಅಂಜನಾದ್ರಿ ಬೆಟ್ಟವೇ ವೀರ ಪರಾಕ್ರಮ ಆಂಜನೇಯ ಜನಿಸಿದ ಸ್ಥಳವಾಗಿದ್ದು, ಪುರಾಣಗಳಲ್ಲೂ ಉಲ್ಲೇಖವಿದೆ ಎಂದು ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ ಹೇಳಿದರು.

ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಪ್ರವಾಸೋದ್ಯಮ ಬೆಳವಣಿಗೆಗಾಗಿ ಅನ್ಯ ರಾಜ್ಯಗಳು ಏನೇ ಹೇಳಿದರೂ ಅಂಜನಾದ್ರಿ ಬೆಟ್ಟವೇ ಹನುಮ ಜನ್ಮಸ್ಥಳ. ಮುಂದಿನ ದಿನಗಳಲ್ಲಿ ತಿರುಪತಿಯಷ್ಟೇ ಪ್ರಾಮುಖ್ಯತೆ ಪಡೆಯಲಿದ್ದು, ಬೇರೆಯವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ವಿನಯ್ ಗುರೂಜಿ, ಕುಂಕುಮಾರ್ಚನೆ ನಂತರ ಸ್ವತಃ ಮಂಗಳಾರತಿ ನೆರವೇರಿಸಿದರು. ನಂತರ ಬೆಟ್ಟದ ಪ್ರಾಂಗಣದಲ್ಲಿರುವ ಕೋತಿಗಳಿಗೆ ಹಣ್ಣುಗಳನ್ನು ನೀಡಿದರು. ಬಿಜೆಪಿ ಸೇರಿ ವಿವಿಧ ಸಂಘಟನೆಗಳ ಮುಖಂಡರು ಗುರೂಜಿಯನ್ನು ಸನ್ಮಾನಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ವಿಜಯನಗರ ಜಿಲ್ಲೆ ಪ್ರಭಾರ ಸಿಂಗನಾಳ ವಿರೂಪಾಕ್ಷಪ್ಪ, ಮಾಜಿ ಉಪಾಧ್ಯಕ್ಷ ಸಂತೋಷ ಕೆಲೋಜಿ, ಮುಖಂಡರಾದ ಎಚ್.ಆರ್.ಚನ್ನಕೇಶವ, ಶಿವು ಆದೋನಿ, ಸಂಗಮೇಶ ಆಯೋಧ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net