

ಗಂಗಾವತಿ: ನಗರದ ಅಮರ್‌ಗಾರ್ಡ್‌ನಲ್ಲಿ ನಡೆದ ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಾದ ಗಲಾಟೆ ಸಂಬಂಧ ಮೂವರ ವಿರುದ್ಧ ನಗರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಪದಗ್ರಹಣ ಸಂದರ್ಭದಲ್ಲಿ ಬ್ಯಾನರ್‌ನಲ್ಲಿದ್ದ ಯುವ ಘಟಕದ ರಾಜ್ಯ ಕಾರ್ಯದರ್ಶಿ ಮಹ್ಮದ್ ಆಸ್ೀ ಹುಸೇನ್ ಭಾವಚಿತ್ರಕ್ಕೆ ಬಣ್ಣ ಬಳಿದಿದ್ದು, ಕೆಲಕಾಲ ಗದ್ದಲ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಮಹ್ಮದ್ ಆಸ್ೀ ಹುಸೇನ್ ನೀಡಿದ ದೂರಿನ ಅನ್ವಯ ಗಲಾಟೆ ನಡೆಸಿದ ಸುಹೇಲ್ ಇತರ ಇಬ್ಬರ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಗುಂಪಿನ ನಡುವೆ ಜಗಳ ನಡೆದಿದ್ದು, ಬ್ಯಾನರ್‌ಗೆ ಬಣ್ಣ ಬಳಿಯಲಾಗಿತ್ತು. ನಂತರ ಮನಿಯಾರ್ ಬೆಂಬಲಿಗರು ಕಾರ್ಯಕ್ರಮ ಬಹಿಷ್ಕರಿಸಿದ್ದರು.