ಅಖಿಲ ಭಾರತ ವಿವಿ ಕ್ರೀಡಾಕೂಟಕ್ಕೆ ಸೆಲೆಕ್ಟ್

Gangavathi Betal Womens Degree College salect
ಅಂತರ ವಿವಿ ಮತ್ತು ಅಖಿಲ ಭಾರತ ವಿವಿಗಳ ಆಯ್ಕೆ ಪ್ರಕ್ರಿಯೆಯ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡ ಗಂಗಾವತಿ ಬೇತಲ್ ಮಹಿಳಾ ಪದವಿ ಕಾಲೇಜಿನ ಕ್ರೀಡಾಪಟುಗಳೊಂದಿಗೆ ಆಡಳಿತಾಧಿಕಾರಿ ಹೇಮಾ ಸುಧಾಕರ, ಅಧ್ಯಕ್ಷ ರಾಜು ಸುಧಾಕರ್, ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಪ್ರಾಚಾರ್ಯ ಬಿಂಗಿ ವೆಂಕಟೇಶ, ಮುಖ್ಯ ತರಬೇತುದಾರ ಬಾಬುಸಾಬ್ ಇತರರಿದ್ದಾರೆ.
Published on

ಗಂಗಾವತಿ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಅಂತರ ವಿವಿ ಮತ್ತು ಅಖಿಲ ಭಾರತ ವಿವಿಗಳ ಆಯ್ಕೆ ಪ್ರಕ್ರಿಯೆಯ ಕ್ರೀಡಾಕೂಟದಲ್ಲಿ ನಗರದ ಬೇತಲ್ ಮಹಿಳಾ ಪದವಿ ಕಾಲೇಜಿನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯೊಂದಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕುಸ್ತಿ, ಪೆಂಕಾಕ್ ಸಿಲತ್, ಕರಾಟೆ, ವುಶು ವಿವಿಧ ವಿಭಾಗದಲ್ಲಿ ಐಶ್ವರ್ಯಾ, ರುಚಿತಾ, ಅಸ್ಮಾ, ಮಹ್ಮದೀಬೇಗಂ, ಆಶಾ, ಪರಿಮಳಾ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂತರ ವಿವಿ ಕ್ರೀಡಾಕೂಟದಲ್ಲಿ ವಿಜೇತರಾದವರು ವಿವಿಧ ರಾಜ್ಯಗಳಲ್ಲಿನ ವಿವಿ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಅಖಿಲ ಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ ಎಂದು ಆಡಳಿತಾಧಿಕಾರಿ ಹೇಮಾ ಸುಧಾಕರ ತಿಳಿಸಿದ್ದಾರೆ. ಅಧ್ಯಕ್ಷ ರಾಜು ಸುಧಾಕರ್, ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಪ್ರಾಚಾರ್ಯ ಬಿಂಗಿ ವೆಂಕಟೇಶ, ಮುಖ್ಯ ತರಬೇತುದಾರ ಬಾಬುಸಾಬ್, ದೈಹಿಕ ಶಿಕ್ಷಕ ಆನಂದ್ ರಾಠೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net