ಎಚ್‌ಐವಿ ಸೋಂಕಿತರ ಬಗ್ಗೆ ಅನುಕಂಪವಿರಲಿ

Gangavathi Aids raly
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಅಭಿಯಾನದಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸೋಮವಾರ ಮಾತನಾಡಿದರು. ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಈಶ್ವರ ಸವಡಿ, ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸದಸ್ಯ ವಾಸುದೇವ ನವಲಿ, ನಯೋಪ್ರಾ ಅಧ್ಯಕ್ಷ ಇಲಿಯಾಸ್ ಖಾದ್ರಿ ಇತರರಿದ್ದರು.
Published on

ಗಂಗಾವತಿ: ಶಿಕ್ಷಣ ಮತ್ತು ಜಾಗೃತಿಯಿಂದ ಎಚ್‌ಐವಿ ನಿಯಂತ್ರಿಸಬೇಕಿದ್ದು, ಸೋಂಕಿತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಹೇಳಿದರು.

ನಗರದ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಏಡ್ಸ್ ದಿನಾಚರಣೆ ನಿಮಿತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮತ್ತು ಉಪವಿಭಾಗ ಆಸ್ಪತ್ರೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಅಸುರಕ್ಷತೆಯಿಂದ ಎಚ್‌ಐವಿಗೆ ತುತ್ತಾಗಿರುವ ಸೋಂಕಿತರ ಬಗ್ಗೆ ಅನುಕಂಪವಿರಲಿ. ಏಡ್ಸ್ ಮೇಲಿರುವ ತಪ್ಪು ತಿಳಿವಳಿಕೆ ದೂರಮಾಡಬೇಕಿದ್ದು, ಮಾನಸಿಕವಾಗಿ ಕುಗ್ಗದಂತೆ ಎಚ್ಚರಿಕೆವಹಿಸಬೇಕು. ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.

ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಈಶ್ವರ ಸವಡಿ, ನಿರ್ಲಕ್ಷ್ಯದಿಂದ ತಾಲೂಕಿನ 3 ಸಾವಿರಕ್ಕೂ ಹೆಚ್ಚು ರೋಗಿಗಳು ಎಚ್‌ಐವಿ ಸೋಂಕಿತರಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಅಭಿಯಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕಿತರ ಬಗ್ಗೆ ಕಾಳಜಿವಹಿಸುವಂತೆ ಸಲಹೆ ನೀಡಿದರು.

ನಗರದ ಉಪವಿಭಾಗ ಆಸ್ಪತ್ರೆಯಿಂದ ಆರಂಭವಾದ ಅಭಿಯಾನ, ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸಮಾರೋಪ ಗೊಂಡಿತು. ಬ್ಯಾಂಡ್ ಮೇಳ, ನಂದಿಕೋಲು, ಗೊಂಬೆ ಕುಣಿತ ಮತ್ತು ಹೆಜ್ಜೆ ಕುಣಿತ ತಂಡಗಳು ಭಾಗವಹಿಸಿದ್ದವು.

ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸದಸ್ಯ ವಾಸುದೇವ ನವಲಿ, ನಯೋಪ್ರಾ ಅಧ್ಯಕ್ಷ ಇಲಿಯಾಸ್ ಖಾದ್ರಿ, ನಗರ ಪಿಐ ಪ್ರಕಾಶ ಮಾಳೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರ, ತಾಲೂಕು ವೈದ್ಯಾಧಿಕಾರಿ ಡಾ.ಚಿತ್ರಿಕಿ ಗೌರಿಶಂಕರ, ತಜ್ಞರಾದ ಡಾ.ನಂದಕುಮಾರ, ಡಾ. ಶರಣಪ್ಪ ಚಕೋಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ಆಪ್ತ ಸಮಾಲೋಚಕರಾದ ಕೆ.ರಾಜೀವ್, ಶಿವಾನಂದ ನಾಯ್ಕರ್, ಪಲ್ಲವಿದೇಸಾಯಿ, ರೋಟರಿ ಕ್ಲಬ್ ಅಧ್ಯಕ್ಷ ಟಿ.ಆಂಜನೇಯ, ಕಾರ್ಯದರ್ಶಿ ವಾಸುಕೊಳಗದ್ ಸೇರಿ ಆಯುಷ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net