ಹಕ್ಕುಗಳಿಗೆ ಸಂಘಟಿತ ಹೋರಾಟ ಅಗತ್ಯ

Gangavathi aictuu
ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಜಿಲ್ಲಾ ಘಟಕದಿಂದ 2ನೇ ಜಿಲ್ಲಾ ಸಮ್ಮೇಳನದ ನಿಮಿತ್ತ ಜಾಗೃತಿ ಜಾಥಾ ನಡೆಯಿತು. ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷೆ ಮೈತ್ರೇಯಿ ಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ವಿಜಯ್ ದೊರೈರಾಜ್, ನಾಗರಾಜ ಪೂಜಾರ್, ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್, ಕಾರ್ಮಿಕ ಹಿರಿಯ ಮುಖಂಡ ಜೆ.ಭಾರದ್ವಾಜ್ ಇತರರಿದ್ದರು.
Published on

ಗಂಗಾವತಿ : ್ಯಾಸಿಸ್ಟ್ ಮನೋಭಾವನೆಯ ರಾಜಕೀಯ ಪಕ್ಷಗಳ ಆಳ್ವಿಕೆಯಿಂದ ಕಾರ್ಮಿಕ ವರ್ಗದ ಹಕ್ಕು ಮತ್ತು ಕಾನೂನುಗಳು ಮರೆಮಾಚುತ್ತಿವೆ ಎಂದು ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷೆ ಮೈತ್ರೇಯಿ ಕೃಷ್ಣನ್ ಹೇಳಿದರು.

ನಗರದ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 2ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಆರ್‌ಎಸ್‌ಎಸ್ ನಿರ್ದೇಶನದಂತೆ ಆಡಳಿತ ನಡೆಸುತ್ತಿದ್ದು, ಜನಸಾಮಾನ್ಯರಿಗೆ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ಖಾಸಗೀಕರಣ ನೀತಿ ಮೂಲಕ ಮೋದಿ ನೇತೃತ್ವದ ಆಡಳಿತ ವ್ಯವಸ್ಥೆ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ನಡೆಸುತ್ತಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಹಿರಿಯ ಮುಖಂಡ ಜೆ.ಭಾರದ್ವಾಜ್ ಮಾತನಾಡಿ, ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳ ಬದಲಾಗಿ 4 ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಕಾರ್ಪೊರೇಟ್ ಬಂಡವಾಳಕ್ಕೆ ದೇಶದ ಸಂಪನ್ಮೂಲ ಒದಗಿಸುತ್ತಿದೆ. ಕಾರ್ಮಿಕ ವರ್ಗದ ವಿನಾಶದ ಹಾದಿಯನ್ನು ಸುಗಮಗೊಳಿಸುತ್ತಿದೆ ಎಂದರು. ಕಾರ್ಮಿಕ ಹಕ್ಕುಗಳಿಗಾಗಿ ನಗರದಾದ್ಯಂತ ಜಾಗೃತಿ ಜಾಥಾ ನಡೆಯಿತು.

ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯರಾದ ವಿಜಯ್ ದೊರೈರಾಜ್, ನಾಗರಾಜ ಪೂಜಾರ್, ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್, ಪದಾಧಿಕಾರಿಗಳಾದ ಪರುಶುರಾಮ್, ಭೀಮಣ್ಣ, ಚಾಂದ್‌ಪಾಷಾ, ಮಾಯಮ್ಮ, ಪಾರ್ವತಮ್ಮ, ಬುರಾನ್ನುದ್ದೀನ್, ರೇಣುಕಮ್ಮ, ಕೆ.ದುರುಗಪ್ಪ, ಹುಲ್ಲೇಶ, ಮಂಜುನಾಥ, ಜಡಿಯಪ್ಪ, ಪೌರಕಾರ್ಮಿಕರು ಇದ್ದರು.

ಎಐಸಿಸಿಸಿಟಿಯು ಜಿಲ್ಲಾ ಸಮಿತಿ ರಚನೆ: ಜೆ.ಭಾರದ್ವಾಜ್(ಗೌರವಾಧ್ಯಕ್ಷ), ವಿಜಯ್ ದೊರೈರಾಜ್(ಅಧ್ಯಕ್ಷ), ಕೇಶವ ನಾಯ್ಕ(ಕಾರ್ಯದರ್ಶಿ) ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net