ಜೈವಿಕ ಕೃಷಿಯಿಂದ ಪೌಷ್ಟಿಕಯುಕ್ತ ಬೆಳೆ

Training Workshop
ಗಂಗಾವತಿ ತಾಲೂಕಿನ ಆಗೋಲಿಯಲ್ಲಿ ಹಮ್ಮಿಕೊಂಡಿದ್ದ ಜೈವಿಕ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಹಾಗೂ ಬೇಸಾಯ ತಜ್ಞ ಡಾ.ನಾರಪ್ಪ ಮಾತನಾಡಿದರು. ಕೃಷಿ ಅಧಿಕಾರಿ ಎಸ್.ಜಿ.ಹರೀಶ್,ಕೃಷಿ ಅಧಿಕಾರಿಗಳಾದ ಗಂಗಾಧರ, ಗಣೇಶ, ಗಂಗಾಧರ ಹಳೇಕೋಟೆ ಇತರರಿದ್ದರು.
Published on

ಗಂಗಾವತಿ: ರಾಸಾಯನಿಕ ಮುಕ್ತ ಕೃಷಿ ಪದ್ಧತಿಯತ್ತ ರೈತರು ಗಮನಹರಿಸಬೇಕಿದ್ದು, ಜೈವಿಕ ಕೃಷಿ ಮೂಲಕ ನೈಸರ್ಗಿಕ ಸಂಪತ್ತು ಹೆಚ್ಚಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಹಾಗೂ ಬೇಸಾಯ ತಜ್ಞ ನಾರಪ್ಪ ಸಲಹೆ ನೀಡಿದರು.

ತಾಲೂಕಿನ ಆಗೋಲಿಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಜೈವಿಕ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದ್ದು, ಇಳುವರಿ ಮೇಲೂ ಪರಿಣಾಮ ಬೀರಲಿದೆ. ಜೈವಿಕ ಕೃಷಿ ಪದ್ಧತಿಯಲ್ಲಿ ಪೌಷ್ಟಿಕಯುಕ್ತ ಬೆಳೆಯೊಂದಿಗೆ ಪರಿಸರ ರಕ್ಷಿಸಬಹುದಾಗಿದೆ ಎಂದರು.

ಕೃಷಿ ಇಲಾಖೆ ವಿಷಯತಜ್ಞ ಶಿವಶೇಖರ ಪಾಟೀಲ್ ಮಾತನಾಡಿ, ಸುಧಾರಿತ ಕೃಷಿ ಪದ್ಧತಿಯೊಂದಿಗೆ ಸಾವಯವ ಕೃಷಿಗೆ ರೈತರು ಆದ್ಯತೆ ನೀಡಬೇಕಿದೆ ಎಂದರು. ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿಯಲ್ಲಿ ಮಾಗಿ ಉಳುಮೆ, ಬೆಳೆ, ಅಂತರ ಮತ್ತು ಮಿಶ್ರ ಬೆಳೆ ಪದ್ಧತಿ ಕುರಿತು ಮಾಹಿತಿ ನೀಡಲಾಯಿತು. ಜೀವಾಮೃತ ತಯಾರಿಕೆ ಕುರಿತು ವೆಂಕಟಗಿರಿ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಜಿ.ಹರೀಶ್ ಮಾಹಿತಿ ನೀಡಿದರು.

ಟ್ರಸ್ಟ್ ಕೃಷಿ ಮೇಲ್ವಿಚಾರಕ ಟಿ.ಡಿ.ಲೋಕೇಶ, ಮುಖಂಡರಾದ ಅಮಾಜಪ್ಪ, ರಾಯಪ್ಪ, ರಾಜು, ಹಾಲಪ್ಪ, ಯಮನೂರಪ್ಪ, ಮಂಜುನಾಥ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net