

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಮಠಾಧೀಶರಾದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀನೃಸಿಂಹ ಸಂಸ್ಕೃತಿ ಸಂಪದ ವತಿಯಿಂದ ಆಯೋಜಿಸಿದ್ದ ಗಂಗಾವತರಣ ಯಕ್ಷ ನೃತ್ಯರೂಪಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಪ್ರೊ. ಎಂ.ಎ. ಹೆಗಡೆ ಅವರ ರಚನೆಯ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ಗಂಗಾವತರಣ ನೃತ್ಯರೂಪಕವನ್ನು ಕು.ತುಳಸಿ ಹೆಗಡೆ ಬೆಟ್ಟಕೊಪ್ಪ ಅವರು ಉತ್ತಮವಾಗಿ ಅಭಿನಯಿಸಿ ಮೆಚ್ಚುಗೆ ಗಳಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಳೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ ಹಾಗೂ ಪ್ರಸಾದನದಲ್ಲಿ ಉಮೇಶ ಹೆಗಡೆ ಸಹಕರಿಸಿದರು. ಮಠದ ಆಡಳಿತ ಮಂಡಳಿ ಸದಸ್ಯರು, ಶಿಷ್ಯವೃಂದದವಿದ್ದರು.
ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್. ಭಾಗವತ್ ತ್ಯಾರಗಲ್ ಸ್ವಾಗತಿಸಿದರು. ವಿನಾಯಕ ಭಟ್ಟ ನೆಲೆಮಾವ ವಂದಿಸಿದರು.