ವಿದ್ಯಾರ್ಥಿಗಳು ವೈಚಾರಿಕತೆ ಬೆಳೆಸಿಕೊಳ್ಳಬೇಕು; ಚಿಂತಕ ಎಚ್.ಕೆ.ವಿವೇಕಾನಂದ ಸಲಹೆ

23032021 GANGAVATI SATH CHINTANA PROGRAME
Published on

ಗಂಗಾವತಿಯಲ್ಲಿ ಸತ್ ಚಿಂತನೆ ಸಂವಾದ ಕಾರ್ಯಕ್ರಮ

ಗಂಗಾವತಿ: ವಿದ್ಯಾರ್ಥಿಗಳು ವೈಚಾರಿಕತೆ ಬೆಳೆಸಿಕೊಳ್ಳುವುದರ ಜತೆಗೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜಸೇವೆ ಕೈಗೊಳ್ಳಬೇಕೆಂದು ಚಿಂತಕ ಎಚ್.ಕೆ.ವಿವೇಕಾನಂದ ಸಲಹೆ ನೀಡಿದರು.

ನಗರದ ಎಚ್‌ಆರ್‌ಎಸ್‌ಎಂ ಪದವಿ ಕಾಲೇಜು ಮತ್ತು ಐಎಂಎ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸತ್ ಚಿಂತನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯ ಮೌಲ್ಯಗಳ ಮರುಸ್ಥಾಪನೆಗಾಗಿ ಬೀದರ್ ಜಿಲ್ಲೆಯ ಔರಾದದಿಂದ ಹಮ್ಮಿಕೊಂಡಿರುವ ಜ್ಞಾನ ಭಿಕ್ಷಾ ಪಾದಾಯತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಾನವೀಯ ಮೌಲ್ಯಗಳು ಇನ್ನೂ ಉಳಿದಿವೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net