ವಿಶ್ವ ಶಾಂತಿಗಾಗಿ ಗಂಗಾಪೂಜೆ

gangapooje
ನೇತ್ರಾವತಿ ನದಿ ತಟದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಹಣತೆಗಳನ್ನು ತೇಲಿ ಬಿಡುವ ಮೂಲಕ ಗಂಗಾಪೂಜೆ ನಡೆಯಿತು.
Published on

ಉಪ್ಪಿನಂಗಡಿ: ಬಾಂಗ್ಲಾ ಸಹಿತ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಅಹಿತಕರ ಘಟನೆಗಳ ನಡುವೆ ವಿಶ್ವದ ಒಳಿತಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಆಶ್ರಯದಲ್ಲಿ ಮಂಗಳವಾರ ರಾತ್ರಿ ಸಾಮೂಹಿಕ ಪ್ರಾರ್ಥನೆ ಮತ್ತು ಗಂಗಾಪೂಜೆ ನೆರವೇರಿತು.

ಶ್ರೀಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ನೇತ್ರಾವತಿ-ಕುಮಾರಧಾರಾ ನದಿಯಲ್ಲಿ ಗಂಗಾ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ಸ್ಮರಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬಳಿಕ ನದಿಯಲ್ಲಿ ಹಣತೆಗಳನ್ನು ತೇಲಿ ಬಿಡುವ ಮೂಲಕ ಗಂಗಾಪೂಜೆ ನೆರವೇರಿಸಲಾಯಿತು.

ಶ್ರೀಕಾಳಿಕಾಂಬಾ ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಜತೆ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಪ್ರಮುಖರಾದ ಸುಧಾಕರ ಶೆಟ್ಟಿ, ಸುಂದರ ಆದರ್ಶ ನಗರ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ನಾಗರಾಜ ಯು., ಕೃಷ್ಣ ಯು., ಕೃಷ್ಣಪ್ರಸಾದ್ ದೇವಾಡಿಗ, ಸುನೀಲ್ ಸಂಗಮ್, ಚಂಪಾ ರಘುರಾಮ, ಸುಜಯಾ ಶರತ್, ಯಶೋದಾ, ಮಾಲತಿ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net